ವಿಟ್ಲ: ವಿಟ್ಲ ಪಡ್ನೂರು ಗ್ರಾಮದ ಕಡಂಬು ಮಸೀದಿ ಬಳಿ ಗುಡ್ಡ ಕುಸಿದ ಪರಿಣಾಮ ಆಟೋ ರಿಕ್ಷಾ ಚಾಲಕರೊಬ್ಬರು ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ನಡೆದಿದೆ.
ಕಡಂಬು ಮಸೀದಿ ಮುಂಭಾಗದಲ್ಲಿರುವ ಗುಡ್ಡ ರಸ್ತೆಗೆ ತಾಗಿಕೊಂಡಿದ್ದು, ದಿಢೀರನೆ ಕುಸಿದು ಬಿದ್ದಿದೆ. ಈ ಸಂದರ್ಭ ರಸ್ತೆಯಲ್ಲಿ ತೆರಳುತ್ತಿದ್ದ ಆಟೋ ಚಾಲಕ ಪಾರಾಗಿದ್ದಾರೆ. ಸ್ಥಳೀಯರು ಮಣ್ಣು ತೆರವುಗೊಳಿಸಿದ್ದಾರೆ.