February 1, 2026

ಬಂಟ್ವಾಳ: ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಪ್ರಕರಣ: ಆರೋಪಿಗೆ ಜೈಲು ಶಿಕ್ಷೆ

0
image_editor_output_image211941367-1722666234865.jpg

ಬಂಟ್ವಾಳ: ಪೊಲೀಸರ ಸರಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪಿಗೆ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ ಮಂಗಳೂರು ನ್ಯಾಯಲಯ ಆದೇಶ ನೀಡಿದೆ.

ಪ್ರಕರಣದ ಆರೋಪಿ ಬಂಟ್ವಾಳ ತಾಲೂಕಿನ ಗೂಡಿನ ಬಳಿ ನಿವಾಸಿ ಮಹಮ್ಮದ್ ರಫೀಕ್ @ರಫಿ ಎಂಬಾತ ಹಲವಾರು ಘೋರ ಪ್ರಕರಣದಲ್ಲಿ ಆರೋಪಿ.

ಈತನನ್ನು ದಿನಾಂಕ 11/9/2019 ರಂದು ಪೊಲೀಸರು ಬೆಳ್ತಂಗಡಿ ತಾಲೂಕಿನ ನ್ಯಾಯಾಲಯದಲ್ಲಿನ ಪ್ರಕರಣದಲ್ಲಿ ಮಾನ್ಯ ಪ್ರಿನ್ಸಿಪಾಲ್ ಸಿವಿಲ್ ಜಡ್ಜ್ ಹಾಗೂ ಜೆ ಎಂ ಎಫ್ ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲು ಮಂಗಳೂರಿನ ಜಿಲ್ಲಾ ಕಾರಾಗೃಹ ದಿಂದ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರು ಪಡಿಸಿ ವಿಚಾರಣೆ ನಡೆದ ಬಳಿಕ ಬೆಳ್ತಂಗಡಿಯ ಮಾನ್ಯ ಸಿವಿಲ್ ಜಡ್ಜ್ ಹಾಗೂ ಜೆಎಂಎಫ್ ಸಿ ನ್ಯಾಯಾಲಯದ ಆದೇಶದಂತೆ ಆರೋಪಿ ಮಹಮ್ಮದ್ ರಫೀಕ್ ನನ್ನು ವಾಪಸು ಮಂಗಳೂರು ಜಿಲ್ಲಾ ಕಾರಾಗೃಹಕ್ಕೆ ಬಿಡಲು ಕೈಕೋಳ ತೊಡಿಸಿಕೊಂಡು ಸರಕಾರಿ ಬಸ್ಸಿನಲ್ಲಿ ಮಂಗಳೂರಿಗೆ ಬಂದು ಪಿ.ವಿ.ಎಸ್ ವೃತ್ತದ ಬಳಿ ಬಸ್ಸಿನಿಂದ ಇಳಿದು ಆರೋಪಿಯನ್ನು ಹಿಡಿದು ಕೊಂಡು ಜಿಲ್ಲಾ ಕಾರಾಗೃಹದ ರಸ್ತೆಯಲ್ಲಿ ನಡೆುಕೊಂಡು ಹೋಗುತ್ತಿರುವಾಗ ಸಂಜೆ 6.30 ಗಂಟೆಗೆ ಮಂಗಳೂರು ಪೂರ್ವ ಪೋಲಿಸ್ ಸ್ಟೇಷನ್ ನ ಸರಹದ್ದಿನ ಮಂಗಳೂರು ನಗರದ ಕೊಡಿಯಲ್ ಬೈಲ್ ರಸ್ತೆಯ ಜಿಲ್ಲಾ ಕಾರಾಗೃಹ ದ ಬಳಿ ಇರುವ ದಿವ್ಯಾ ಎನ್ ಕ್ಲೇವ್ ಅಪಾರ್ಟ್ಮೆಂಟ್ ನ ಬಳಿ ಆತನ ಜೊತೆಗೆ ಭದ್ರಿಕೆ ಕರ್ತವ್ಯಕ್ಕೆ ಇದ್ದ ಪೊಲೀಸರನ್ನು ದೂಡಿ ಹಾಕಿ ಕೈಕೋಳದಿಂದ ಹಲ್ಲೆ ನಡೆಸಿ ಪೊಲೀಸರ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ತಪ್ಪಿಸಿಕೊಂಡು ಓಡಿ ಹೋಗಿದ್ದ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಮಂಗಳೂರು ಪೂರ್ವ ಪೋಲಿಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಮಾರುತಿ ಎಸ್‌ವಿ ರವರು ಭಾಗಶ ತನಿಕೆಯನ್ನು ಮಾಡಿದ್ದು ನಂತರ ಆಗಿನ ಪೋಲಿಸ್ ನಿರೀಕ್ಷಕ ಸವಿತ್ರತೇಜ್ ತನಿಖೆ ನಡೆಸಿ ಮಾನ್ಯ ನ್ಯಾಯಾಲಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ಮಂಗಳೂರಿನ ಆರನೇ ಜೇ ಎಂ ಫ್ ಸಿ ನ್ಯಾಯಾಲಯದ ನ್ಯಾಯಾಧೀಶರಾದ ಪೂಜಶ್ರಿ ಅವರು ಆರೋಪಿಯ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ ಕಾಲಂ 332 ಐ ಪಿ ಸಿ, ಅಪರಾಧಕ್ಕೆ 6 ತಿಂಗಳು ಸಾದ ಜೈಲು ವಾಸ, 324 ಐ ಪಿ ಸಿ ಅಪರಾಧಕ್ಕೆ 6 ತಿಂಗಳು ಜೈಲು ಮತ್ತು 1500 ರೂಪಾಯಿ ದಂಡ, ದಂಡ ತೆರಲು ತಪ್ಪಿದಲ್ಲಿ 15 ದಿನ ಸಾದಾ ಸಜೆ, ಕಲಂ 353 ಐ ಪಿ ಸಿ ಅಪರಾಧಕ್ಕೆ 6 ತಿಂಗಳು ಸಜೆ ಮತ್ತು 1500 ದಂಡ ದಂಡ ತೆರಲು ತಪ್ಪಿದಲ್ಲಿ 15 ದಿನ ಸಜೆ , ಕಲಂ 224 ಅಪರಾಧಕ್ಕೆ 3 ತಿಂಗಳು ಸಾದಾ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕ ಜನಾರ್ದನ್ ಅವರು ವಾದಿಸಿದ್ದರು.

Leave a Reply

Your email address will not be published. Required fields are marked *

error: Content is protected !!