March 17, 2026

ಕಾರ್ಕಳ: ಟಿಪ್ಪರ್ ಲಾರಿ ಬೈಕ್ ಗೆ ಡಿಕ್ಕಿ:  ಬೈಕ್ ಸವಾರನ ಕಾರ್ ಮೆಕ್ಯಾನಿಕ್  ಯುವಕ ಮೃತ್ಯು

0
image_editor_output_image-77233288-1722236464029

ಕಾರ್ಕಳ : ಉಡುಪಿ ಜಿಲ್ಲೆಯ ಕಾರ್ಕಳ  ತಾಲೂಕಿನ  ಪುಲ್ಕೇರಿ ಬಳಿಯ ಫುಡ್ ಬಾಸ್ಕೇಟ್ ಮುಂಭಾಗದಲ್ಲಿ ಇಂದು ಸೋಮವಾರ ಬೆಳಿಗ್ಗೆ ನಡೆದ  ಟಿಪ್ಪರ್ ಮತ್ತು ಬೈಕ್ ಡಿಕ್ಕಿ ಅಪಘಾತದಲ್ಲಿ ಸವಾರ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ  ಸಂಭವಿಸಿದೆ.

ಬೈಪಾಸ್ ನಿವಾಸಿ, ಕಾರ್‌ ಮೆಕ್ಯಾನಿಕ್ ನಿಜಾಂ ‌(21)  ಮೃತ ಯುವಕನಾಗಿದ್ದಾನೆ. ಕಾರ್ಕಳದಿಂದ ಬೈಪಾಸ್ ಕಡೆಗೆ ಸಾಗುತ್ತಿದ್ದ ಟಿಪ್ಪರ್ ಬೈಪಾಸ್ ನಿಂದ ಕಾರ್ಕಳದತ್ತ ಬರುತ್ತಿದ್ದ  ನಿಜಾಂ ಚಲಾಯಿಸುತ್ತಿದ್ದ ಬೈಕ್ ಮುಖಾಮುಖಿ ಡಿಕ್ಕಿಯಾಗಿದೆ. ಪರಿಣಾಮ ಸವಾರ ನಿಜಾಂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತದೇಹ ಕಾರ್ಕಳ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿದ್ದು ಸಂಚಾರಿ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ. ಮೃತ ನಿಜಾಂ ತಂದೆ ಇಮ್ತಿಯಾಜ್‌, ತಾಯಿ ಹಾಗೂ ಮೂವರು ಸಹೋದರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!