September 17, 2024

ಬೆಳ್ತಂಗಡಿ: ಬೊಲೆರೋ ವಾಹನ ಡಿಕ್ಕಿ ಹೊಡೆದು 6ನೇ ತರಗತಿ ವಿದ್ಯಾರ್ಥಿನಿ ಮೃತ್ಯು

0

ಬೆಳ್ತಂಗಡಿ: ಬೈಕ್‌ಗೆ ಬೊಲೆರೋ ಢಿಕ್ಕಿ ಹೊಡೆದ ಪರಿಣಾಮ 6ನೇ ತರಗತಿ ಬಾಲಕಿ ಮೃತಪಟ್ಟ ಘಟನೆ ಬೆಳ್ತಂಗಡಿ ಮುಂಡಾಜೆ ಸೀಟು ಸಮೀಪ ನಡೆದಿದೆ.

ಮಂಡಾಜೆ ಕಲ್ಮಂಜ ಕುಡೆಂಚಿ ಗುರುಪ್ರಸಾದ್ ಗೋಖಲೆ ಅವರ ಮಗಳು ಅನರ್ಘ್ಯ(12) ಮೃತ ಬಾಲಕಿ.

ಗುರುಪ್ರಸಾದ್ ಗೋಖಲೆ ಹಾಗೂ ಅವರ ಮಗಳು ಅನರ್ಘ್ಯ ಉಜಿರೆಯಿಂದ ಮನೆಗೆ ತೆರಳುತ್ತಿದ್ದರು. ಈ ವೇಳೆ ಮಾರ್ಗ ಮಧ್ಯೆ ಬೊಲೆರೋ ಬೈಕ್‌ಗೆ ಹಿಂದಿನಿಂದ ಢಿಕ್ಕಿ ಹೊಡೆದು ಪರಾರಿಯಾಗಿತ್ತು. ಅಪಘಾತದಲ್ಲಿ ತಂದೆ ಮಗಳು ಇಬ್ಬರೂ ಗಾಯಗೊಂಡಿದ್ದರು.

ಅಪಘಾತದಲ್ಲಿ ಗಾಯಗೊಂಡಿದ್ದ ತಂದೆ ಮಗಳನ್ನು ತಕ್ಷಣ ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ದುರಾದೃಷ್ಟವಶಾತ್ ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿ ಅನರ್ಘ್ಯ ಬಳಿಕ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.

ಇನ್ನು ಅಪಘಾತವಾದ ಬಳಿಕ ತಪ್ಪಿಸಿಕೊಂಡಿದ್ದ ಬೊಲೆರೋ ವಾಹನವನ್ನು ಸಾರ್ವಜನಿಕರ ಸಹಕಾರದಿಂದ ಪತ್ತೆಹಚ್ಚಿ ವಶಕ್ಕೆ ಪಡೆದುಕೊಳ್ಳಲಾಗಿದೆ.

Leave a Reply

Your email address will not be published. Required fields are marked *

error: Content is protected !!