March 18, 2026

ಉಡುಪಿ: ಉರುಳಿಬಿದ್ದ ತೆಂಗಿನ‌ ಮರ: ಮನೆ, ಎರಡು ರಿಕ್ಷಾಗಳಿಗೆ ಹಾನಿ

0
image_editor_output_image1511969570-1721984502572.jpg

ಉಡುಪಿ: ಭಾರೀ ಸುಂಟರಗಾಳಿಗೆ ತೆಂಗಿನ ಮರವೊಂದು ಧರೆಗೆ ಉರುಳಿದ ಪರಿಣಾಮ ಮನೆ ಹಾಗೂ ಎರಡು ರಿಕ್ಷಾಗಳಿಗೆ ಹಾನಿಯಾಗಿ ಲಕ್ಷಾಂತರ ರೂ. ನಷ್ಟ ಉಂಟಾಗಿರುವ ಘಟನೆ ಹಿರಿಯಡ್ಕ ಸಮೀಪ ಕುಕ್ಕೆಹಳ್ಳಿ ಬಜೆ ಬಳಿ ಶುಕ್ರವಾರ ನಸುಕಿನ ವೇಳೆ 2ಗಂಟೆ ಸುಮಾರಿಗೆ ನಡೆದಿದೆ.

ಬಜೆಯ ಅಮ್ಮಣ್ಣಿ ಸೇರಿಗಾರ್ತಿ ಎಂಬವರ ಮನೆ ಸಮೀಪದ ತೆಂಗಿನ ಮರ ಬಿದ್ದ ಪರಿಣಾಮ ಮನೆ ಹಾನಿಯಾಗಿದೆ.

ಮನೆ ಬಳಿ ನಿಲ್ಲಿಸಿದ ಅಮ್ಮಣಿ ಅವರ ಮಕ್ಕಳಾದ ಗಣಪತಿ ಸೇರಿಗಾರ ಹಾಗೂ ರವಿ ಸೇರಿಗಾರ ಎಂಬವರ ಅಟೋ ರಿಕ್ಷಾಗಳು ಸಂಪೂರ್ಣ ಜಖಂಗೊಂಡಿವೆ. ಇದರಿಂದ ಲಕ್ಷಾಂತರ ನಷ್ಟ ರೂ. ಉಂಟಾಗಿದೆ ಎಂದು ತಿಳಿದುಬಂದಿದೆ

Leave a Reply

Your email address will not be published. Required fields are marked *

error: Content is protected !!