ವಿಟ್ಲ ವಲಯ ಗ್ಯಾರೇಜ್ ಮಾಲಕರ ವತಿಯಿಂದ ಉಚಿತ ನೇತ್ರಾ ಚಿಕಿತ್ಸಾ ಸೇವಾ ಶಿಬಿರ
ವಿಟ್ಲ: ದ.ಕ ಗ್ಯಾರೇಜ್ ಮಾಲಕರ ಸಂಘ ವಿಟ್ಲ ವಲಯ, ಯಕ್ಷಭಾರತ ಸೇವಾ ಪ್ರತಿಷ್ಠಾನ , ಮತ್ತು ಭಾರತ ಅಡಿಟೋರಿಯಂ ಚಂದಳಿಕೆ, ಪುತ್ತೂರು ಆನಂದಶ್ರಮ ಸೇವಾ ಟ್ರಸ್ಟ್ , ಮಂಗಳೂರು ಜಿಲ್ಲಾ ವೆನ್ ಲಾಕ್ ಆಸ್ಪತ್ರೆ, ವಿಟ್ಲ ಸಮುದಾಯ ಆರೋಗ್ಯ ಕೇಂದ್ರ ಇದರ ಜಂಟಿ ಆಶ್ರಯದಲ್ಲಿ ಉಚಿತ ನೇತ್ರ ಚಿಕಿತ್ಸಾ ಸೇವಾ ಶಿಬಿರ ಮಂಗಳವಾರ ನಡೆಯಿತು.
ಅಡ್ಯನಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ವಿಶ್ವೇಶ್ವರ ವಿ.ಕೆ ಉದ್ಘಾಟಿಸಿದರು. ವಿಟ್ಲ ವಲಯ ಗ್ಯಾರೇಜ್ ಮಾಲಕರ ಸಂಘದ ಅಧ್ಯಕ್ಷ ಲಿಯೋ ಡಿ ಲಸ್ರಾದೋ ಅಧ್ಯಕ್ಷತೆ ವಹಿಸಿದ್ದರು. ವ್ಯದ್ಯ ಡಾ. ಗಣಪತಿ ಭಟ್ ಮೊಗಸಾಲೆ, ರಾಧಾಕೃಷ್ಣ ಎರುಂಬು ಮತ್ತು ಸಂಜೀವ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ವರ್ಷಿಣಿ ಮತ್ತು ವೈ ವಿತೇಶ್ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ, ಗೌರವಿಸಲಾಯಿತು.
ಪುತ್ತೂರು ಆನಂದಾಶ್ರಮ ಸೇವಾ ಟ್ರಸ್ಟ್ ಅಧ್ಯಕ್ಷೆ ಡಾ. ಗೌರಿ ಪೈ, ನೇತ್ರಾ ಪರಿವೀಕ್ಷಕ ಡಾ. ಶಾಂತರಾಜ್ , ವಿಟ್ಲ ಸಮುದಾಯ ಆರೋಗ್ಯ ಕೇಂದ್ರ ಆಡಳಿತ ವೈದ್ಯಾಧಿಕಾರಿ ಡಾ.ವೇದಾವತಿ ಬಲ್ಲಾಳ್, ಸುಳ್ಯ ವಲಯದ ಅಧ್ಯಕ್ಷ ಮಲ್ಲೇಶ್ ಬೆಟ್ಟಂಪಾಡಿ, ಗಂಗಾಧರ ಶೆಟ್ಟಿ ಹೊಸ ಮನೆ, ಬಿ.ಕೆ ಬಾಬು, ಡಾ. ಪಲ್ಲವಿ, ದಿನೇಶ್ ಕುಮಾರ್, ಬಿ.ಕೆ ಬಾಬು ಉಪಸ್ಥಿತರಿದ್ದರು.
ಗೌರವ ಸಲಹೆಗಾರ ಸುಂದರ ಆಚಾರ್ಯ ಸ್ವಾಗತಿಸಿದರು. ಚಂದ್ರಶೇಖರ ಭಟ್ ಪ್ರಸ್ತಾವನೆ ಮಾಡಿದರು. ರಾಧಾಕೃಷ್ಣ ಎರುಂಬು ನಿರೂಪಿಸಿದರು. ರಾಜಶೇಖರ ಆಚಾರ್ಯ ವಿಟ್ಲ ವಂದಿಸಿದರು.
ಪವನ್ ಪ್ರಾರ್ಥಿಸಿದರು.
ಇಂದಿನ ಶಿಬಿರದ ಕೆಲವು ಮುಖ್ಯಾಂಶಗಳು –
ಕಣ್ಣಿನ ತಪಾಸಣೆ ಮಾಡಿಸಿದವರು -400ಕ್ಕೂ ಮಿಕ್ಕಿ,
ಉಚಿತವಾಗಿ ವಿತರಿಸಿದ ಕನ್ನಡಕಗಳ ಸಂಖ್ಯೆ -262
ಶಸ್ತ್ರ ಚಿಕಿತ್ಸೆಗೆ ಶಿಫಾರಸು – 20 ಮಂದಿಗೆ




