March 17, 2026

ಕಟ್ಟತ್ತಿಲ ಜುಮಾ ಮಸೀದಿಯಲ್ಲಿ ಜುಲೈ 19 ರಂದು ಕೂರತ್ ತಂಙಳ್ ಅನುಸ್ಮರಣೆ

0
image_editor_output_image-1759637008-1721313249276

ವಿಟ್ಲ: ಕಟ್ಟತ್ತಿಲ ಮೊಹಲ್ಲಾದ ಖಾಝಿಯಾಗಿ ಹಲವು ವರ್ಷಗಳಿಂದ ನೇತೃತ್ವ ನೀಡಿದ ಅಸ್ಸಯ್ಯಿದ್ ಫಝಲ್ ಕೋಯಮ್ಮ ಅಲ್ ಮದನಿ ಅಲ್ ಬುಖಾರಿ ಕೂರತ್ ತಂಙಳ್ ರವರು ಇತ್ತೀಚೆಗೆ ಇಹಲೋಕ ತ್ಯಜಿಸಿದ್ದು ಅವರ ಅನುಸ್ಮರಣೆ ಮತ್ತು ಖತ್ಮುಲ್ ಖುರ್ ಆನ್ ಮಜ್ಲಿಸ್ ಜುಲೈ 19 ಶುಕ್ರವಾರ ಜುಮಾ ನಮಾಝ್ ನ ಬಳಿಕ ಕಟ್ಟತ್ತಿಲ ಜುಮಾ ಮಸೀದಿ ಯಲ್ಲಿ ನಡೆಯಲಿದೆ.

ಕಾರ್ಯ ಕ್ರಮಕ್ಕೆ ಕಟ್ಟತ್ತಿಲ ಖತೀಬ್ ಉಸ್ತಾದ್ ಪಿ.ಎ.ಮುಹಮ್ಮದ್ ಸಖಾಫಿ ಅಲ್ ಫುರ್ಖಾನಿ ಪೂಡಲ್ ರವರು ನೇತೃತ್ವ ವಹಿಸಲಿದ್ದು ಅಸ್ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಅಲ್ ಮದನಿ ಅಲ್ ಬುಖಾರಿ ಕೂರತ್ ರವರ ಪುತ್ರ ಅಸ್ಸಯ್ಯಿದ್ ಮುಹ್ಲರ್ ಮಸ್ ಹಬ್ ತಂಙಳ್, ಅಸ್ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ ಹಾಗೂ ಖ್ಯಾತ ವಿದ್ವಾಂಸ ಬಹು ಮಹ್ಮೂದುಲ್ ಫೈಝಿ ವಾಲೆ ಮುಂಡಾವು ಉಸ್ತಾದ್ ಭಾಗವಹಿಸಲಿದ್ದಾರೆ ಎಂದು ಜಮಾ ಅತ್ ಅಧ್ಯಕ್ಷ ಡಿ.ಎ.ಅಬ್ದುಲ್ ಹಮೀದ್ ಹಾಜಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!