May 5, 2026

ಬಂಟ್ವಾಳ: ಅಂಗಡಿಗೆ ತೆರಳಿದ್ದ ಮುಸ್ಲಿಂ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿ, ಟೈಲರ್ ಧರ್ಮರಾಜ್ ಬಂಧ‌ನ

0
image_editor_output_image709705998-1720516595011.jpg

ಬಂಟ್ವಾಳ: ಅಂಗಡಿಗೆ ತೆರಳಿದ್ದ 6 ವರ್ಷದ ಮುಸ್ಲಿಂ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದಡಿ ವ್ಯಕ್ತಿಯೋರ್ವನನ್ನು ಬಂಟ್ವಾಳ ಪೋಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.

ಬಂಟ್ವಾಳ ತಾಲೂಕಿನ ಬ್ರಹ್ಮರಕೂಟ್ಲು ಕಳ್ಳಿಗೆ ಗ್ರಾಮದ ನಿವಾಸಿ ಧರ್ಮರಾಜ್ ಯಾನೆ ಧರ್ಮ (40) ಬಂಧಿತ ಆರೋಪಿಯಾಗಿದ್ದಾ‌ನೆ.

ಈತ ವೃತ್ತಿಯಲ್ಲಿ ಟೈಲರ್ ಕೆಲಸ ಮಾಡಿಕೊಂಡಿದ್ದಾನೆ. ಇದೇ ಟೈಲರ್ ಅಂಗಡಿಯಲ್ಲಿ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.

ಬಂಟ್ವಾಳ ತಾಲೂಕಿನ‌ ಬಿಮೂಡಾ ಗ್ರಾಮದಲ್ಲಿ ಈ‌ ಘಟನೆ ಜುಲೈ 8ರಂದು ನಡೆದಿದ್ದು, ಈತನ ವಿರುದ್ಧ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಘಟನೆ ವಿವರ:
ದಿನಾಂಕ ಜುಲೈ 8ರ ಸಂಜೆ 4:30 ಸುಮಾರಿಗೆ ಬಾಲಕಿಯು ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ಮಸೀದಿ ಪಕ್ಕದ ಕಟ್ಟಡವೊಂದರಲ್ಲಿ ಕಾರ್ಯಾಚರಿಸುತ್ತಿರುವ ಅಂಗಡಿ ತೆರಳಿದ್ದಳು. ಇದರ ಪಕ್ಕದಲ್ಲೇ ಆರೋಪಿ ಧರ್ಮ ಟೈಲರ್ ಅಂಗಡಿ ಇಟ್ಟುಕೊಂಡಿದ್ದು, ಇದರಲ್ಲಿ ಕೆಲಸ ಮಾಡುತ್ತಿದ್ದನು.

ಇದೇ ವೇಳೆ ಆರೋಪಿ ಧರ್ಮ ಬಾಲಕಿ ಅಂಗಡಿ ಬರುವುದನ್ನು ನೋಡಿದ್ದು, ” ನಿನಗೆ ಹೊಸ ಇಸ್ತ್ರಿ ಪೆಟ್ಟಿಗೆ ತೋರಿಸುತ್ತೇನೆ‌ ಒಳಗೆ ಬಾ” ಎಂದು ಬಾಲಕಿಯ ಕೈಯನ್ನು ಹಿಡಿದು ಅಂಗಡಿಯ ಒಳಗೆ ಕರೆದಿದ್ದಾನೆ‌. ಬಳಿಕ ಬಾಲಕಿಗೆ ಲೈಂಗಿಕ ಎಸಗಿದ್ದಾನೆ ಎಂದು ಬಾಲಕಿಯ ಪೋಷಕರು ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ‌.

ಘಟನೆ ಬಳಿಕ ಬಾಲಕಿ ಮನೆಗೆ ತೆರಳಿ ಈ ವಿಚಾರವನ್ನು ತಿಳಿಸಿದ್ದಾಳೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.

ಘಟನೆ ಸಂಬಂಧಿಸಿ ಬಾಲಕಿಯ ಪೋಷಕರು ಬಂಟ್ವಾಳ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಆರೋಪಿಯನ್ನು ಸೋಮವಾರ ರಾತ್ರಿಯೇ ಬಂಧಿಸಿದ್ದಾರೆ. ಈ ಸಂಬಂಧ ಪೋಷಕರು ಮಹಿಳಾ ಆಯೋಗಕ್ಕೂ ದೂರು ನೀಡಿದ್ದಾರೆ‌.

Leave a Reply

Your email address will not be published. Required fields are marked *

error: Content is protected !!