May 6, 2026

ಬೆಂಗಳೂರಿನಲ್ಲಿರುವ ವಿರಾಟ್‌ ಕೊಹ್ಲಿ ಮಾಲಕತ್ವದ ಪಬ್‌ ವಿರುದ್ಧ FIR ದಾಖಲು

0
image_editor_output_image-565324866-1720506020349.jpg

ಬೆಂಗಳೂರು: ಕ್ರಿಕೆಟಿಗ ವಿರಾಟ್‌ ಕೊಹ್ಲಿ ಮಾಲೀಕತ್ವದ ಪಬ್‌ ಮೇಲೆ ಪೊಲೀಸರು ಎಫ್‌ ಐಆರ್‌ ದಾಖಲಿಸಿರುವ ಘಟನೆ ನಡೆದಿದೆ.

ಬೆಂಗಳೂರಿನ ಕಸ್ತೂರಬಾ ರಸ್ತೆಯಲ್ಲಿರುವ ಒನ್ 8 ಕಮ್ಯೂನ್ ಪಬ್ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ.

ಜು.6 ರಂದು ಮಧ್ಯರಾತ್ರಿ 1:30ರವರೆಗೆ ಪಬ್‌ ತೆರದಿತ್ತು. 1ಗಂಟೆಯವರೆಗೆ ಮಾತ್ರ ಪಬ್‌ ತೆರವಿಗೆ ಅವಕಾಶ ನೀಡಲಾಗಿತ್ತು. ಅವಧಿಗೂ ಮೀರಿ ಪಬ್‌ ತೆರೆದಿದ್ದ ಬಗ್ಗೆ, ಜೋರಾಗಿ ಮ್ಯೂಸಿಕ್‌ ಕೇಳಿ ಬರುತ್ತಿದ್ದರಿಂದ ಗಸ್ತಿನಲ್ಲಿದ್ದ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ.

ಪೊಲೀಸರು ಪಬ್ ಗೆ ತೆರಳಿ ಪರಿಶೀಲನೆ ನಡೆಸಿದಾಗ ಅಲ್ಲಿ ಅನೇಕ ಗ್ರಾಹಕರು ಪಾರ್ಟಿ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಅವಧಿಗೂ ಮೀರಿ ಪಬ್‌ ಓಪನ್‌ ಮಾಡಿದ್ದರಿಂದ ಪೊಲೀಸರು ಎಫ್‌ ಐಆರ್‌ ದಾಖಲಿಸಿದ್ದಾರೆ. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!