March 17, 2026

ಕಾಸರಗೋಡು: ನ್ಯೂಮೋನಿಯಾದಿಂದ ನಾಲ್ಕು ವರ್ಷದ ಬಾಲಕಿ ಮೃತ್ಯು

0
image_editor_output_image1650266702-1720192603421

ಕಾಸರಗೋಡು: ಜಿಲ್ಲೆಯಲ್ಲಿ ಮಳೆ ಬಿರುಸು ಗೊಳ್ಳುತ್ತಿದ್ದಂತೆ ಜ್ವರ ಹಾಗೂ ಸಾಂಕ್ರಾಮಿಕ ರೋಗ ಉಲ್ಬಣಗೊಳ್ಳುತ್ತಿದೆ . ನೂರಾರು ಮಂದಿ ದಿನಂಪ್ರತಿ ಆಸ್ಪತ್ರೆಗಳಿಗೆ ಭೇಟಿ ನೀಡುತ್ತಿದ್ದಾರೆ.

ನ್ಯೂಮೋನಿಯಾದಿಂದ ನಾಲ್ಕು ವರ್ಷದ ಬಾಲಕಿ ಮೃತ ಪಟ್ಟ ಘಟನೆ ನೀರ್ಚಾಲು ಸಮೀಪ ನಡೆದಿದೆ.ನೀರ್ಚಾಲು ಪುದುಕೋಳಿಯ ನಿವಾಸಿ ಕಾಸರಗೋಡು ಕೆನರಾ ಬ್ಯಾಂಕ್ ನೌಕರ ಹರೀಶ್ ಮತ್ತು ಮೊಗ್ರಾಲ್ ಪುತ್ತೂರು ಹಯರ್ ಸೆಕಂಡರಿ ಶಾಲಾ ಶಿಕ್ಷಕಿ ಕುಸುಮಾ ರವರ ಪುತ್ರಿ ಭೂಮಿಕಾ (4) ಮೃತ ಪಟ್ಟ ವಳು. ಜ್ವರ ದಿಂದ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು.

Leave a Reply

Your email address will not be published. Required fields are marked *

You may have missed

error: Content is protected !!