ವಿಟ್ಲ: ಕಂಬಳಬೆಟ್ಟು ಜನಪ್ರಿಯ ಸೆಂಟ್ರಲ್ ಸ್ಕೂಲ್ ನಲ್ಲಿ ಶಿಕ್ಷಕ-ರಕ್ಷಕ ಸಭೆ:
ಉಚಿತ ದಂತ ತಪಾಸಣಾ ಶಿಬಿರ
ವಿಟ್ಲ: ಕಂಬಳಬೆಟ್ಟು ಜನಪ್ರಿಯ ಸೆಂಟರ್ ಸ್ಕೂಲ್ ನಲ್ಲಿ ಶಿಕ್ಷಕ-ರಕ್ಷಕ ಸಭೆ ಮತ್ತು ವಿಟ್ಲ ಫಾತಿಮಾ ಸ್ಮೈಲ್ ಕೇರ್ ವತಿಯಿಂದ ಉಚಿತ ದಂತ ತಪಾಸಣಾ ಶಿಬಿರ ಶನಿವಾರ ನಡೆಯಿತು.
ವಿ.ಕೆ ಅಬ್ದುಲ್ ಬಶೀರ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಜನಪ್ರಿಯ ಸೆಂಟ್ರಲ್ ಸ್ಕೂಲ್ ನ ಶಿಕ್ಷಕ ರಕ್ಷಕ ಸಭೆಯಲ್ಲಿ ಪ್ರಾಂಶುಪಾಲೆ ಶೈಲಜಾ ಆರ್ ಶೆಟ್ಟಿ, ಸಂಘದ ಅಧ್ಯಕ್ಷ ಶಾಕೀರ್ ಅಳಕೆಮಜಲು, ಉಪಾಧ್ಯಕ್ಷ ತಾನಾಜಿ ಭರತ್ ಬಾಬರ್, ಕಾರ್ಯದರ್ಶಿ ಫಾತಿಮಾ ಅಫ್ರಿನಾ, ಜತೆ ಕಾರ್ಯದರ್ಶಿ ಡೈನಾ ದಾಸ್, ಕೋಶಾಧಿಕಾರಿ ಉಷಾ ಕಿರಣ, ಸದಸ್ಯರಾದ ಸಫ್ವಾನ್, ಇಕ್ಬಾಕ್ ಶೀತಲ್, ಇಬ್ರಾಹಿಂ ಕೆ.ಎಂ, ಅಶ್ರಪ್ ವೈ ಉಪಸ್ಥಿತರಿದ್ದರು.
ಫಾತಿಮಾ ಸ್ಮೈಲ್ ಕೇರ್ ನ ಡಾ. ಸರ್ ಪ್ರಾಝ್, ಡಾ. ಶಾಫಿ ಅವರ ನೇತೃತ್ವದಲ್ಲಿ ಉಚಿತ ದಂತ ತಪಾಸಣೆ ನಡೆಯಿತು.
ಡಾ. ಸಮ್ಜಾಸ್, ಡಾ.ಸೌಮ್ಯ, ಸಮೀದ, ಜಯಲಕ್ಷ್ಮೀ ಅವರು ಸಹಕರಿಸಿದರು.







