May 5, 2026

ಬಂಟ್ವಾಳ: ನೇತ್ರಾವತಿ ನದಿಗೆ ಮೀನು ಹಿಡಿಯಲು ಹೋದ ವ್ಯಕ್ತಿ ನೀರುಪಾಲು: ಅಜಿಲಮೊಗರು ಸಮೀಪ ನಡೆದ ಘಟನೆ

0
image_editor_output_image1189774099-1720147069824

ಬಂಟ್ವಾಳ: ಸ್ನೇಹಿತರ ಜೊತೆ ನೇತ್ರಾವತಿ ನದಿಗೆ ಮೀನು ಹಿಡಿಯಲು ಹೋದ ವ್ಯಕ್ತಿಯೊಬ್ಬರು ನದಿಗೆ ಬಿದ್ದು ನೀರುಪಾಲಾದ ಘಟನೆ ಇಂದು ಸಂಜೆ ನಡೆದಿದೆ.

ಸುರತ್ಕಲ್ ನಿಂದ ಸರಪಾಡಿ ಸಮೀಪದ ಮಾವಿನ ಕಟ್ಟೆ ಎಂಬಲ್ಲಿಯ ನೆಂಟರ ಮನೆಗೆ ಬಂದ ವ್ಯಕ್ತಿಗಳು ಸೇರಿದಂತೆ ನಾಲ್ಕು ಮಂದಿ ಇಂದು ಸಂಜೆ ಗಾಳ ಹಾಕಿ ಮೀನು ಹಿಡಿಯಲು ಅಜಿಲಮೊಗರು ಸಮೀಪದ ಕೂಟೇಲು ಸೇತುವೆಯ ಸಮೀಪದ ಕಿಂಡಿ ಅಣೆಕಟ್ಟು ಬಳಿ ಬಂದು ಮೀನು ಹಿಡಿಯುತ್ತಿರುವ ವೇಳೆ ಮೈಕಲ್ (53) ಎಂಬವರು ಆಯ ತಪ್ಪಿ ನೇತ್ರಾವತಿ ನದಿಗೆ ಬಿದ್ದು ನಾಪತ್ತೆಯಾಗಿದ್ದಾರೆ.

ಭಾರೀ ಮಳೆಯಿಂದ ನದಿ ಉಕ್ಕಿ ಹರಿಯುತಿದ್ದು ದೋಣಿಯ ಮೂಲಕ ಹುಡುಕಾಟ ನಡೆಸಿದರೂ ಪ್ರಯೋಜನವಾಗಿಲ್ಲ ನಂತರ ಬಂಟ್ವಾಳ ಅಗ್ನಿಶಾಮಕ ದಳದವರು ಆಗಮಿಸಿ ಹುಡುಕಾಟ ನಡೆಸಿದರೂ ನೀರಿನ‌ ಹರಿವು ಹೆಚ್ಚಾಗಿದ್ದರಿಂದ ಹಾಗೂ ಕತ್ತಲದ್ದರಿಂದ ಕಾರ್ಯಾಚರಣೆಗೆ ತೊಂದರೆಯಾಗಿದ್ದು ನಾಳೆ ಮತ್ತೆ ಹುಡುಕಾಟ ನಡೆಸಲಾಗುತ್ತದೆ ಎಂದು ತಿಳಿದು ಬಂದಿದೆ. ಸ್ಥಳದಲ್ಲಿ ಉಪ್ಪಿನಂಗಡಿ ಹಾಗೂ ಬಂಟ್ವಾಳ ಗ್ರಾಮಾಂತರ ಪೊಲೀಸರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!