March 23, 2026

ಉಡುಪಿ: ತಲವಾರು ದಾಳಿ ಪ್ರಕರಣ: ದೂರು ನೀಡಿದ್ದ ಪುತ್ತೂರಿನ ಚರಣ್‌ ಮನೆಯಲ್ಲೂ ಮಾರಕಾಯುಧ ಪತ್ತೆ

0
image_editor_output_image-231371487-1719081456166.jpg

ಉಡುಪಿ: ಉಡುಪಿ ಪುತ್ತೂರಿನ ಬಿರಿಯಾನಿ ಪಾಯಿಂಟ್‌ ಬಳಿ ನಡೆದ ತಲವಾರು ದಾಳಿ ಪ್ರಕರಣದಲ್ಲಿ ಹಲ್ಲೆಗೊಳಗಾಗಿ ದೂರು ನೀಡಿದ್ದ ಉಡುಪಿ ಪುತ್ತೂರಿನ ಚರಣ್‌ (18) ಎಂಬಾತನ ಮನೆಯಲ್ಲೂ ಮಾರಕಾಯುಧ ತಲವಾರು ಇರುವುದನ್ನು ಪತ್ತೆಹಚ್ಚಿರುವ ಪೊಲೀಸರು ತಲವಾರು ಸಹಿತ ಆತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಆತನ ಮನೆಯಲ್ಲಿ ಮಾರಕಾಯುಧ ಇರುವ ಬಗ್ಗೆ ಉಡುಪಿ ನಗರ ಠಾಣೆಯ ಪೊಲೀಸರಿಗೆ ಮಾಹಿತಿ ಲಭಿಸಿದ್ದು, ಅದರಂತೆ ಜೂ. 21ರಂದು ನ್ಯಾಯಾಲಯದಿಂದ ಸರ್ಚ್‌ ವಾರಂಟ್‌ ಪಡೆದುಕೊಂಡು ಮನೆಯಲ್ಲಿ ಶೋಧ ನಡೆಸಿದಾಗ ತಲವಾರು ದೊರೆತಿದೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!