March 17, 2026

ಇಂಡಿಯನ್ ಓವರ್ ಶೀಶ್ ಕಾಂಗ್ರೆಸ್ (ಐ.ಓ.ಸಿ)ವತಿಯಿಂದ ನಿರಂತರ ಹಜ್ಜಾಜ್ ಗಳ ಸೇವೆ ಶ್ಲಾಘನೀಯ

0
image_editor_output_image1176673230-1718716111250

ಪವಿತ್ರ ಹಜ್ ಯಾತ್ರೆಯಲ್ಲಿ ತೊಡಗಿರುವ ಅಸಂಖ್ಯಾತ ಯಾತ್ರಿಕರ ಸೇವೆಯಲ್ಲಿ ತೊಡಗಿರುವ ಹಾಗೂ ಇತರ ಪ್ರಮುಖ ಸೇವೆಗಳನ್ನು ಒದಗಿಸುವ ಸಲುವಾಗಿ ಹಲವಾರು ವರ್ಷಗಳಿಂದ ಪವಿತ್ರ ಹಜ್ ಯಾತ್ರಿಕರ ಮನಮೆಚ್ಚಿದ ಸೇವೆ ಸಹಿತ ಅನಾರೋಗ್ಯ ಪೀಡಿತ ತೀರಾ ಅಸೌಖ್ಯದಿಂದಿರುವ ಹಿರಿಯ ಹಜ್ ಯಾತ್ರಿಕರ ಸೇವೆಯ ಮೂಲಕ ತಮ್ಮನ್ನು ತಾವು ತೊಡಗಿಸಿಕೊಂಡು ಸ್ವಂತ ಒಡ ಹುಟ್ಟಿದವರಿಗಿಂತ ಅನ್ಯೋನ್ಯತೆಯಿಂದ ಸೇವೆಗೈಯ್ಯುತ್ತಿರುವ ನಮ್ಮ ಸಮುದಾಯದ ಪ್ರತಿಷ್ಠಿತ ಹಾಗೂ ಹೆಮ್ಮೆಯ ಸಂಘ ಸಂಸ್ಥೆಗಳ ಪೈಕಿ ಮುಂಚೂಣಿಯಲ್ಲಿರುವ ಹಾಗೂ ಶ್ಲಾಘನೀಯ ಸೇವೆಗಳನ್ನು  ಒದಗಿಸುವ ಸಂಘಟನೆಯಾಗಿದೆ


ಇಂಡಿಯನ್ ಓವರ್ ಶೀಶ್ ಕಾಂಗ್ರೆಸ್ (ಐ.ಓ.ಸಿ) ಇಂತಹ ಹಲವಾರು ಹಜ್ ಯಾತ್ರಾರ್ಥಿಗಳಿಗೆ ಬೇಕಾದ ಎಲ್ಲಾ ರೀತಿಯ ಸಹಕಾರ ವ್ಯವಸ್ಥೆಗಳನ್ನು ನೀಡುವ ಮಹತ್ವಪೂರ್ಣ ಕಾರುಣ್ಯ ಸೇವೆಯಿಂದಾಗಿ ಅಂತ  ರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.


ಇಂಡಿಯನ್ ಓವರ್ ಶೀಶ್ ಕಾಂಗ್ರೆಸ್ (ಐ.ಓ.ಸಿ)ಇದರ ರಾಷ್ಟ್ರೀಯ ಅಧ್ಯಕ್ಷರಾದ ಜಾವೆದ್ ಕಲ್ಲಡ್ಕ ಹಾಗೂ ಈ ಸಂಘಟನೆಯ ರಾಜ್ಯ ಮಟ್ಟದ ಕೋ-ಆರ್ಡಿನೇಟರ್ ಇಬ್ರಾಹಿಂ ಕನ್ನಂಗಾರ್ ಇವರ ನೇತೃತ್ವದಲ್ಲಿ ಇನ್ನಷ್ಟು ಹಲವಾರು ಸೇವೆಗಳಲ್ಲಿ ನಿರತವಾಗಿದೆ. ಈ ಸಂಘಟನೆ ಅಂತರಾಷ್ಟ್ರೀಯ ಮಟ್ಟದಲ್ಲಿ ಜನ ಮನ್ನನೆ ಗಳಿಸಲಿ ಹಾಗೂಭವಿಷ್ಯದಲ್ಲಿ ಸದಾ ಯಶಸ್ಸು ಸಾಧಿಸಲಿ ಎಂದು ಪ್ರಸಕ್ತ ವರ್ಷ ಪವಿತ್ರ ಹಜ್ ಯಾತ್ರೆಯಲ್ಲಿರುವ
   ಮೊಹಿಯುದ್ದೀನ್ ಜುಮಾ ಮಸೀದಿ ಮೂಲರಪಟ್ಣ ಇದರ ಗೌರವಾನ್ವಿತ ಅಧ್ಯಕ್ಷರಾದ ಜ! ಎಮ್ ಬಿ ಅಶ್ರಫ್ ಮೂಲರಪಟ್ಣ ಸಂಭ್ರಮದ ಈದ್ ಉಲ್ ಅದ್ ಆ ಸುಖ ಸಂತೋಷ ಮತ್ತು ನೆಮ್ಮದಿಯ ವಾತಾವರಣ ನಿರ್ಮಾಣವಾಗಲಿ ಎಂದು ಅನಿವಾಸಿ ಸಹೋದರ ಹಾಗು ಊರಿನ ಸರ್ವರಿಗೂ ಶುಭ ಹಾರೈಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!