ನೀರುಮಾರ್ಗ: ಯುವಕನ ಮೇಲೆ ತಲವಾರು ದಾಳಿ ಪ್ರಕರಣ:
ನಾಲ್ವರು ಆರೋಪಿಗಳು ವಶಕ್ಕೆ
ಮಂಗಳೂರು: ನಗರ ಹೊರ ವಲಯದ ನೀರುಮಾರ್ಗ ಸಮೀಪ ಪಡು ಎಂಬಲ್ಲಿ ಡಿಸೆಂಬರ್ 10ರ ಶುಕ್ರವಾರ ರಾತ್ರಿ ಅಬ್ದುಲ್ ರಿಯಾಜ್ (38) ಎಂಬಾತ ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಶನಿವಾರ ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ತಿಳಿಸಿದ್ದಾರೆ.
ಪಡು ಬಳಿ ಸ್ಥಳೀಯ ನಿವಾಸಿ ಅಬ್ದುಲ್ ರಜಾಕ್ ಶುಕ್ರವಾರ ರಾತ್ರಿ ಇರಿತಕ್ಕೊಳಗಾಗಿದ್ದರು. ರಾತ್ರಿ 9 ಗಂಟೆಗೆ ಕಾರಿನಲ್ಲಿ ಬಂದ 5 ರಿಂದ 6 ಮಂದಿ ಅಪರಿಚಿತ ವ್ಯಕ್ತಿಗಳ ತಂಡ ಕೃತ್ಯ ಎಸಗಿತ್ತು ಎಂದು ದೂರಲಾಗಿತ್ತು.
“ಗಾಯಾಳು ಅಬ್ದುಲ್ ರಿಯಾಜ್ ಆಸ್ಪತ್ರೆಯಲ್ಲಿದ್ದು ಹಲ್ಲೆಗೆ ಸ್ಪಷ್ಟ ಕಾರಣ ಗೊತ್ತಾಗಿಲ್ಲ. ಗಾಯಾಳು ಜೀವಾಪಾಯದಿಂದ ಪಾರಾಗಿದ್ದಾರೆ. ಆರೋಪಿಗಳ ಬಗ್ಗೆ ನಮಗೆ ಅಗತ್ಯ ಮಾಹಿತಿ ಸಿಕ್ಕಿದೆ. ಇದಲ್ಲದೆ ರಿಟ್ಜ್ ಕಾರಿನಲ್ಲಿ ಮಹಿಳೆಯರು ಧರಿಸುವ ಒಂದು ಜತೆ ಚಪ್ಪಲಿ ಹಾಗೂ ಮಹಿಳೆಗೆ ಸಂಬಂಧಿಸಿದ ಇತರ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದೇವೆ” ಎಂದು ಪೊಲೀಸ್ ಆಯುಕ್ತರು ಹೇಳಿದ್ದಾರೆ.
ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 307 ಐಪಿಸಿ ಪ್ರಕರಣ ದಾಖಲಾಗಿದೆ.





