ವಿಟ್ಲದಲ್ಲಿ THE KNOWLEDGE HUB’ ಟ್ಯೂಷನ್ & ಸ್ಕಿಲ್ ಡೆವೆಲೆಪ್‌ಮೆಂಟ್ ಸೆಂಟರ್ ಶುಭಾರಂಭ: ವಿಟ್ಲದಲ್ಲಿ ಎಲ್ಲ ವ್ಯವಸ್ಥೆಗಳನ್ನೂಳಗೊಂಡ ಸುಸಜ್ಜಿತ ಟ್ಯೂಷನ್ ಸೆಂಟರ್
ವಿಟ್ಲ: ‘THE KNOWLEDGE HUB’ ಟ್ಯೂಷನ್ & ಸ್ಕಿಲ್ ಡೆವೆಲೆಪ್‌ಮೆಂಟ್ ಸೆಂಟರ್ ವಿಟ್ಲ ಶಾಲಾ ರಸ್ತೆಯ ಮೋತಿ ಸಿಟಿ ಸಂಕೀರ್ಣದ ಎರಡನೇ ಮಹಡಿಯಲ್ಲಿ ಶುಭಾರಂಭಗೊಂಡಿತು.
ನೂತನ ಟ್ಯೂಷನ್ ಸಂಸ್ಥೆಯನ್ನು ಜನಪ್ರಿಯಾ ಫೌಂಡೇಶನ್ ಚೇರ್‌ಮೆನ್ ಡಾ.ಅಬ್ದುಲ್ ಬಶೀರ್ ಉದ್ಘಾಟಿಸಿದರು. ತರಗತಿ ಕೊಠಡಿ ಉದ್ಘಾಟನೆಯನ್ನು ವಿಠ್ಠಲ್ ಜೇಸಿಸ್ ಆಂಗ್ಲಮಾಧ್ಯಮ ಪ್ರೌಢ ಶಾಲೆಯ ಅಧ್ಯಕ್ಷರು ಎಲ್ ಎನ್ ಕೂಡೂರು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಸೈಂಟ್ ರೀಟಾ ಶಾಲೆಯ ಮುಖ್ಯ ಶಿಕ್ಷಕರು ವಂದನೀಯ ಫಾದರ್ ಸುನೀಲ್ ಪ್ರವೀಣ್ ಪಿಂಟೋ ಲೋಗೋ ಅನಾವರಣಗೊಳಿಸಿ ಬಳಿಕ ಇವರೆಲ್ಲರೂ ನೂತನ ಟ್ಯೂಷನ್ ಕೇಂದ್ರಕ್ಕೆ ಶುಭಹಾರೈಸಿದರು.
ವೇದಿಕೆಯಲ್ಲಿ ಬಂಟ್ವಾಳ ತಾಲೂಕು ಸಂಯುಕ್ತ ಜಮಾಅತ್ ಅಧ್ಯಕ್ಷರು ಜನಾಬ್ ಹನೀಫ್ ಹಾಜಿ ಗೋಳ್ತಮಜಲು, ಮಾಜಿ ಶಾಸಕಿ ಶಕುಂತಳಾ ಟಿ ಶೆಟ್ಟಿ, ಕೃಷ್ಣಯ್ಯ ಕೆ ವಿಟ್ಲ ಅರಮನೆ, ಕರಾವಳಿ ಸುದ್ದಿ ವಾರ ಪತ್ರಿಕೆಯ ಸಂಪಾದಕರು ರೋಷನ್ ಬೊನಿಫಾಸ್ ಮಾರ್ಟಿಸ್, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರು ಎಂ ಎಸ್ ಮಹಮ್ಮದ್, ಜಂಇಯತುಲ್ ಫಲಾಹ್ ಬಂಟ್ವಾಳ ತಾಲೂಕು ಅಧ್ಯಕ್ಷರು ರಶೀದ್ ವಿಟ್ಲ, ವಿಟ್ಲ ಸರಕಾರಿ ಪ್ರೌಢ ಶಾಲೆ RMSA ಗೌರವಾಧ್ಯ್ಷಕರು ಸುಬ್ರಾಯ ಪೈ, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯರು ರವಿ ಪ್ರಕಾಶ್, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯರು ವಿ. ಕೆ. ಎಂ ಅಶ್ರಫ್, ಶಾಕಿರ್ ಅಳಕೆಮಜಲು ಪ್ರಧಾನ ಕಾರ್ಯದರ್ಶಿ ಡಿ ಗ್ರೂಪ್ ವಿಟ್ಲ, ಬಾಬು ಕೆ.ವಿ ಅಧ್ಯಕ್ಷರು ವಾಣಿಜ್ಯ ಮತ್ತು ವರ್ತಕರ ಸಂಘ ವಿಟ್ಲ, ಕಿರಣ್ ಕುಮಾರ್ ಬ್ರಹ್ಮಾವರ ಅಧ್ಯಕ್ಷರು ರೋಟರಿ ಕ್ಲಬ್ ವಿಟ್ಲ, ಹೊರೈಝಾನ್ ಸಂಸ್ಥೆ ವಿಟ್ಲ ಪ್ರಾಂಶುಪಾಲರು ಮುನಾಝರ್ ಮುಡಿಪು, ಇವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು, ನೂತನ ಟ್ಯೂಷನ್ ಕೇಂದ್ರಕ್ಕೆ ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಜನಪ್ರಿಯಾ ಫೌಂಡೇಶನ್ ಚೇರ್‌ಮೆನ್ ಡಾ.ಅಬ್ದುಲ್ ಬಶೀರ್, ವಿಠ್ಠಲ್ ಜೇಸಿಸ್ ಆಂಗ್ಲಮಾಧ್ಯಮ ಪ್ರೌಢ ಶಾಲೆಯ ಅಧ್ಯಕ್ಷರು ಎಲ್ ಎನ್ ಕೂಡೂರು, ಸೈಂಟ್ ರೀಟಾ ಶಾಲೆಯ ಮುಖ್ಯ ಶಿಕ್ಷಕರು ವಂದನೀಯ ಫಾದರ್ ಸುನೀಲ್ ಪ್ರವೀಣ್ ಪಿಂಟೋ, ಬಂಟ್ವಾಳ ತಾಲೂಕು ಸಂಯುಕ್ತ ಜಮಾಅತ್ ಅಧ್ಯಕ್ಷರು ಜನಾಬ್ ಹನೀಫ್ ಹಾಜಿ ಗೋಳ್ತಮಜಲು, ಕರಾವಳಿ ಸುದ್ದಿ ವಾರ ಪತ್ರಿಕೆಯ ಸಂಪಾದಕರು ರೋಷನ್ ಬೊನಿಫಾಸ್ ಮಾರ್ಟಿಸ್, ಜಂಇಯತುಲ್ ಫಲಾಹ್ ಬಂಟ್ವಾಳ ತಾಲೂಕು ಅಧ್ಯಕ್ಷರು ರಶೀದ್ ವಿಟ್ಲ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಹಲವು ಶಾಲೆಗಳ ಶಿಕ್ಷಕರು ಹಾಗೂ ಇನ್ನಿತರ ಗಣ್ಯ ಅತಿಥಿಗಳು ಉಪಸ್ಥಿತರಿದ್ದರು. ಸಂಸ್ಥೆಯ ಮಾಲಕರಾದ ಇಮ್ತಿಯಾಝ್ ಶಾ ತುಂಬೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಲೋಕೇಶ್ ರೈ ಕಾರ್ಯಕ್ರಮ ನಿರೂಪಿಸಿದರು.
ಹೆಚ್ಚಿನ ಮಾಹಿತಿಗಾಗಿ ಇಂದೇ ಭೇಟಿ ಕೊಡಿ
THE KNOWLEDGE HUB’ ಟ್ಯೂಷನ್ & ಸ್ಕಿಲ್ ಡೆವೆಲೆಪ್‌ಮೆಂಟ್ ಸೆಂಟರ್
ಮೋತಿ ಸಿಟಿ ಸಂಕೀರ್ಣ
ಶಾಲಾ ರಸ್ತೆ ವಿಟ್ಲ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9880203126, 9880205258
‘THE KNOWLEDGE HUB’ ಟ್ಯೂಷನ್ & ಸ್ಕಿಲ್ ಡೆವೆಲೆಪ್‌ಮೆಂಟ್ ಸೆಂಟರ್ ನಲ್ಲಿ ಎಲ್ ಕೆ ಜಿ ಯಿಂದ ಪಿಯುಸಿ ವರೆಗಿನ ಮಕ್ಕಳಿಗೆ ಎಲ್ಲಾ ವಿಷಯದ ಬಗ್ಗೆ ಟ್ಯೂಶನ್ ನೀಡಲಾಗುತ್ತದೆ. ಸಂಜೆ 5 ಗಂಟೆಯಿಂದ 7.30 ವರೆಗೆ ಟ್ಯೂಶನ್ ನೀಡಲಾಗುತ್ತದೆ. ವಿವಿಧ ಕಾಲೇಜ್ ಗಳಲ್ಲಿ ವ್ಯಾಸಂಗ ಮಾಡಿ ಅನುಭವ ಇರುವ ಶಿಕ್ಷಕರು ತರಬೇತಿ ನೀಡಲಿದ್ದಾರೆ. ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ವಿಜ್ಞಾನ, ಗಣಿತ, ವಿಶೇಷ ಹೆಚ್ಚಿನ ಶಿಕ್ಷಕರನ್ನು ನಿಯೋಜಿಸಿ ತರಬೇತಿ ನೀಡಲಾಗುತ್ತದೆ. ಟ್ಯೂಶನ್ ಜತೆಯಲ್ಲಿ ಸ್ಕಿಲ್ ಡೆವಲಂಪ್ ಮೆಂಟ್ ಸೇರಿದಂತೆ ವಿದ್ಯಾರ್ಥಿಗಳಿಗೆ ಕಲಿಕೆಗೆ ಪೂರಕವಾಗುವ ವಿಷಯಗಳನ್ನು ತಿಳಿಸಿ ಕೊಡಲಾಗುತ್ತದೆ ಎಂದು ಸಂಸ್ಥೆಯ ಮಾಲಕರಾದ ಇಮ್ತಿಯಾಝ್ ಶಾ ತುಂಬೆ ಹಾಗೂ ಮಹಮ್ಮದ್ ಆಲಿ ವಿಟ್ಲ ತಿಳಿಸಿದ್ದಾರೆ. ಈಗಾಗಲೇ ಪ್ರವೇಶಾತಿ ಪ್ರಾರಂಭಗೊಂಡಿದೆ.