March 17, 2026

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಾರೀ ಮಳೆ: ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು-ಜನ ಜೀವನ ಅಸ್ತವ್ಯಸ್ತ

0
IMG-20240530-WA0003.jpg

ಸುಬ್ರಹ್ಮಣ್ಯ: ಕುಮಾರ ಪರ್ವತ ತಪ್ಪಲಿನಲ್ಲಿ ಕೆಲ ದಿನಗಳಿಂದ ನಿರಂತರ ಮಳೆ ಸುರಿಯುತ್ತಿದೆ. ಗುರುವಾರ ಮಧ್ಯಾಹ್ನ ವೇಳೆ ಸುರಿದ ಭಾರೀ ಮಳೆಗೆ ಕುಕ್ಕೆ ಸುಬ್ರಮಣ್ಯ ಮತ್ತು ಆದಿಸುಬ್ರಮಣ್ಯ ಭಾಗದ ಕೆಲವು ಅಂಗಡಿಗಳಿಗೆ ನೀರು ನುಗ್ಗಿದ್ದು ವರ್ತಕರು ಆತಂಕಕ್ಕೆ ಒಳಗಾಗಿದ್ದಾರೆ.

ನೂಚಿಲ ಎಂಬಲ್ಲಿ ಪ್ರಸನ್ನ ತೋಡ್ತಿಲ್ಲಯ ಎಂಬವರ ಅಂಗಳದಲ್ಲೇ ಮಳೆ ಕೆಸರು ನೀರು ಹರಿದು ಹೋಗಿ ಜಾಗದ ಕಂಪೌಂಡು ಕುಸಿದಿದೆ. ನೂಚೀಲದಲ್ಲಿ ಕೆಲವು ಮನೆ ಅಂಗಳಕ್ಕೆ, ಸುಬ್ರಮಣ್ಯದ ಕೆಲವು ಅಂಗಡಿಗಳಿಗೆ, ಮಳೆ ನೀರು ನುಗ್ಗಿ ಸಮಸ್ಯೆ ಉಂಟಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!