ಸುಳ್ಯ: ನ. ಪಂ ನ ಎಲ್ಲಾ ವಿಪಕ್ಷ ಸದಸ್ಯರಿಂದ ವಿಧಾನ ಪರಿಷತ್ ಚುನಾವಣೆಗೆ ಮತದಾನ:
ಪಕ್ಷೇತರರಿಂದ ಕಾಂಗ್ರೆಸ್ ಬೆಂಬಲ
ಸುಳ್ಯ: ನಗರ ಪಂಚಾಯತ್ ನಲ್ಲಿ ವಿಧಾನ ಪರಿಷತ್ ಚುನಾವಣೆ ಮತದಾನ ಇಂದು ನಡೆಯಿತು.
ಸುಳ್ಯ ನಗರ ಪಂಚಾಯಿತಿ ನ ಎಲ್ಲಾ ವಿಪಕ್ಷ ಸದಸ್ಯರು ಚುನಾವಣೆಯಲ್ಲಿ ಭಾಗವಹಿಸಿದ್ದರು. ಕಾಂಗ್ರೆಸ್ ಪಕ್ಷದ ಸದಸ್ಯರುಗಳಾದ ಎಂ ವೆಂಕಪ್ಪ ಗೌಡ, ಬಾಲಕೃಷ್ಣ ಭಟ್ ಕೊಡಂಕೇರಿ, ಡೇವಿಡ್ ಧೀರ ಕ್ರಾಸ್ತ, ಶರೀಫ್ ಕಂಠಿ, ಪಕ್ಷೇತರ ಸದಸ್ಯರುಗಳಾದ ರಿಯಾಜ್ ಕಟ್ಟೆಕ್ಕರ್ಸ್, ಕೆ ಎಸ್ ಉಮ್ಮರ್ ಚುನಾವಣೆಯಲ್ಲಿ ಪಾಲ್ಗೊಂಡಿದ್ದರು. ವೀಕ್ಷಕರಾಗಿ ನಗರ ಪಂಚಾಯಿತಿ ಮಾಜಿ ಸದಸ್ಯ ಹಾಜಿ ಮುಸ್ತಫಾ ಜನತಾ ಉಪಸ್ಥಿತರಿದ್ದರು.
ಅದೇ ರೀತಿ ಸುಳ್ಯ ಶಾಸಕ ಎಸ್ ಅಂಗಾರ, ನಗರ ಪಂಚಾಯತ್ ಪಂಚಾಯತ್ ಆಡಳಿತ ಪಕ್ಷದ ಬಿಜೆಪಿ ಸದಸ್ಯರುಗಳು ಕೂಡ ಮತದಾನದಲ್ಲಿ ಭಾಗವಹಿಸಿದ್ದರು.







