ಸುರತ್ಕಲ್: ಟೋಲ್ ಗೇಟ್‌ಗೆ ಮುತ್ತಿಗೆ ಹಾಕಿದ್ದ ಪ್ರಕರಣ: 101 ಜನರಿಗೆ ಸಮನ್ಸ್ ಜಾರಿ
ಸುರತ್ಕಲ್: ಇಲ್ಲಿನ ಎನ್‌ಐಟಿಕೆಯಲ್ಲಿ ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಟೋಲ್ ಗೇಟ್‌ಗೆ ಮುತ್ತಿಗೆ ಹಾಕಿದ್ದ ಹೋರಾಟ ಸಮಿತಿಯ 101 ಜನರಿಗೆ ಮಂಗಳೂರು ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿದೆ. ಹಾಗೂ ಮೇ 4ರಂದು ನ್ಯಾಯಾಲಯಕ್ಕೆ ಹಾಜರಾಗಲು ಸೂಚಿಸಿದೆ.
2022ರ ನವೆಂಬರ್‌ನಲ್ಲಿ ಟೋಲ್ ಗೇಟ್ ತೆರವು ಹೋರಾಟ ಸಮಿತಿಯು ಟೋಲ್ ಗೇಟ್ ತೆರವಿಗಾಗಿ ನೇರ ಕಾರ್ಯಾಚಣೆಗೆ ಕರೆ ನೀಡಿತ್ತು. ಈ ಹಿನ್ನೆಲೆ ಸಾವಿರಾರು ಹೋರಾಟಗಾರರು ಟೋಲ್ ಕೇಂದ್ರಕ್ಕೆ ಮುತ್ತಿಗೆ ಹಾಕಿದ್ದರು. ಈ ಸಂದರ್ಭ 250 ಕ್ಕೂ ಅಧಿಕ ಹೋರಾಟಗಾರರನ್ನು ಬಂಧಿಸಲಾಗಿತ್ತು.





