ಕಾಲುವೆಯಲ್ಲಿ ಬಿದ್ದು ಇಬ್ಬರು ಯುವಕರು ಸಾವು
ರಾಯಚೂರು: ಎನ್‌ಆರ್‌ಬಿಸಿ ಕಾಲುವೆಯಲ್ಲಿ ಬಿದ್ದು ಇಬ್ಬರು ಯುವಕರು ಸಾವನ್ನಪ್ಪಿದ ಘಟನೆ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಬೆಂಡೋಣಿ ಗ್ರಾಮದಲ್ಲಿ ನಡೆದಿದೆ.
ಊರ ಜಾತ್ರೆ ನಿಮಿತ್ತ ಮನೆಯಲ್ಲಿನ ಬಟ್ಟೆ ಹಾಸಿಗೆ ತೊಳೆಯಲು ಪಾಲಕರೊಂದಿಗೆ ಕಾಲುವೆಗೆ ಹೋದಾಗ ಘಟನೆ ನಡೆದಿದೆ.
ಲಿಂಗಸುಗೂರು ತಾಲೂಕಿನ ಬೆಂಡೋಣಿ ಗ್ರಾಮದ ಲಕ್ಕಣ್ಣ (22) ಹಾಗೂ ಬಸವಂತ (25) ಮೃತ ಯುವಕರು. ಬಟ್ಟೆ ತೊಳೆಯೋ ಮೊದಲು ಓರ್ವ ಯುವಕ ಕಾಲು ಜಾರಿ ನೀರಿಗೆ ಬಿದ್ದಿದ್ದ. ಅವನನ್ನು ಕಾಪಾಡಲು ಮತ್ತೋರ್ವ ಯುವಕ ನೀರಿಗೆ ಧುಮುಕಿದ್ದ. ಆದರೆ ಇಬ್ಬರಿಗೂ ಈಜು ಬಾರದ ಹಿನ್ನೆಲೆ ಕಾಲುವೆಯಲ್ಲಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ದೇವೇಗೌಡರು ಪ್ಲಾನ್





