December 15, 2025

ಮಂಗಳೂರು: ಕಾಲೇಜ್ ವಿದ್ಯಾರ್ಥಿಗಳಿಗೆ MDMA ಮಾದಕ ವಸ್ತು ಮಾರಾಟ: ಸಿಸಿಬಿ ಪೊಲೀಸರ ದಾಳಿ, ಇಬ್ಬರು ಆರೋಪಿಗಳ ಬಂಧನ

0
image_editor_output_image-432994183-1714582928696

ಮಂಗಳೂರು: ಮಂಗಳೂರು ನಗರದ ಕೋಟೆಕಾರ್ ಬೀರಿ ಬಳಿಯ ಮನೆಯೊಂದರಲ್ಲಿ ಬೃಹತ್ ಪ್ರಮಾಣದಲ್ಲಿ ಅಕ್ರಮವಾಗಿ MDMA ಮಾದಕ ವಸ್ತುವನ್ನಿರಿಸಿ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಆಧರಿಸಿ ದಾಳಿ ನಡೆಸಿದ ಸಿಸಿಬಿ ಪೊಲೀಸರು ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ.

ಉಳ್ಳಾಲ ಬಸ್ತಿಪಡ್ಪು ನಿವಾಸಿ ಮೊಹಮ್ಮದ್ ಇಶಾನ್ (35), ಉಳ್ಳಾಲ ನಿವಾಸಿ ಜಾಫರ್ ಸಾಧಿಕ್ (35) ಬಂಧಿತರು. ಆರೋಪಿಗಳು ಬೆಂಗಳೂರಿನಿಂದ ಮಾದಕ ವಸ್ತುಗಳನ್ನು ತಂದು ಮಂಗಳೂರಿನಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಮಾರಾಟ ಮಾಡಿ ಹಣ ಸಂಪಾದನೆ ಮಾಡುತ್ತಿದ್ದರು. 9,00,000/- ರೂ. ಮೌಲ್ಯದ 407 ಗ್ರಾಂ ನಿಷೇಧಿತ MDMA ಮಾದಕ ವಸ್ತು, ಡಿಜಿಟಲ್ ತೂಕ ಮಾಪನ, ಮೊಬೈಲ್ ಫೋನ್ ಗಳು ಹಾಗೂ ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಂಡಿದ್ದಾರೆ.

407 ಗ್ರಾಂ MDMA ಮಾದಕ ವಸ್ತು-(9,00,000/-), ಕಪ್ಪು ಬಣ್ಣದ ಟೊಯೋಟಾ ಕಂಪೆನಿಯ ಕ್ಯಾಂಬ್ರಿ ಕಾರು-1 (6,00,000/-), ನೀಲಿ ಬಣ್ಣದ TECNO ಕಂಪೆನಿಯ ಮೊಬೈಲ್ ಫೋನ್ -1 (10,000/-), ಬಿಳಿ ಬಣ್ಣದ REALME ಕಂಪೆನಿಯ REALME 11PRO ಮೊಬೈಲ್ ಫೋನ್ -1 (30,000/-), ನೀಲಿ ಬಣ್ಣದ I PHONE ಕಂಪೆನಿಯ I PHONE 13 pro ಮೊಬೈಲ್ ಫೋನ್ -1 (40,000/-), ಕಡು ನೀಲಿ ಬಣ್ಣದ NOKIA ಕಂಪೆನಿಯ ಮೊಬೈಲ್ ಫೋನ್ -1 (1,000/-), ಡಿಜಿಟಲ್ ತೂಕ ಮಾಪನ -1, ನಗದು ರೂ. ಹಣ 32,800/- ವಶಕ್ಕೆ ಪಡೆಯಲಾಗಿದೆ. ಸೊತ್ತುಗಳ ಒಟ್ಟು ಮೌಲ್ಯ- 16,13,800/- ರೂ. ಆಗಬಹುದು.

ಈ ಹಿಂದೆ ಮಂಗಳೂರು ನಗರದ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಗಾಂಜಾ ಮಾರಾಟ, ಹಲ್ಲೆ, ಕೊಲೆಯತ್ನ ಹಾಗೂ ಕೊಡಗು ಜಿಲ್ಲೆಯ ಕುಶಾಲನಗರ ಠಾಣೆಯಲ್ಲಿ ದರೋಡೆ ಪ್ರಕರಣ ಸೇರಿದಂತೆ ಒಟ್ಟು 9 ಪ್ರಕರಣಗಳು ಇವರ ಮೇಲೆ ದಾಖಲಾಗಿರುತ್ತವೆ. ಮೊಹಮ್ಮದ್ ಇಶಾನ್ ಮೇಲೆ ಈ ಹಿಂದೆ ಮಂಗಳೂರು ನಗರದ ಕೊಣಾಜೆ ಪೊಲೀಸ್ ಠಾಣೆಯಲ್ಲಿ MDMA ಮಾರಾಟ ಪ್ರಕರಣ ದಾಖಲಾಗಿರುತ್ತದೆ.

Leave a Reply

Your email address will not be published. Required fields are marked *

error: Content is protected !!