ವಿಟ್ಲ: ಕೊಡಂಗಾಯಿ ಎವೈಎಫ್ ಸಂಘ ಸಂಸ್ಥೆಯಿಂದ ಕೊಡಂಗಾಯಿ ಮದ್ರಸ ವಿಧ್ಯಾರ್ಥಿಗಳಿಗೆ ಪುಸ್ತಕ ವಿತರಣೆ
ಕಳೆದ ಇಪ್ಪತ್ತನಾಲ್ಕು ವರ್ಷಗಳಿಂದ ಧಾರ್ಮಿಕ ಹಾಗೂ ಸಾಮಾಜಿಕ ರಂಗದಲ್ಲಿ ಸಕ್ರಿಯವಾಗಿ ಕಾರ್ಯಾಚರಿಸುತ್ತಿರುವ “ವಿಶೇಷವಾಗಿ ಕಲಿಯುವಿಕೆಗೆ ಹೆಚ್ಚು ಪ್ರಾಧಾನ್ಯ ನೀಡುತ್ತಾ ಬಂದಿರುವ”
ಕೊಡಂಗಾಯಿ ನಾಡಿನ ಹೆಮ್ಮೆಯ ಸಂಘಟನೆಯಾದ ಬೆಳ್ಳಿಹಬ್ಬದ ಹೊಸ್ತಿಲಲ್ಲಿರುವ ಅಲ್-ಅಮೀನ್ ಯೂತ್ ಫೆಡರೇಷನ್ (ರಿ) ಎವೈಎಫ್ ಕೊಡಂಗಾಯಿ ಇದರ ವತಿಯಿಂದ
ಮುಹ್ಯುದ್ದೀನ್ ಜುಮಾ ಮಸ್ಜಿದ್ ಕೊಡಂಗಾಯಿ ಇದರ ಅಧೀನದಲ್ಲಿರುವ
“ಸಿರಾಜುಲ್ ಇಸ್ಲಾಂ ಮದ್ರಸ,ಮದ್ರಸತ್ತುನ್ನೂರಿಯ ಕೊಡಂಗಾಯಿ,ಶಂಸುಲ್ ಹುದಾ ಮದ್ರಸ ರಾಧುಕಟ್ಟೆ ಕೊಡಂಗಾಯಿ” ಇದರ 1 ರಿಂದ 8 ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ‘ಎವೈಎಫ್’ ಸಮಿತಿ ಸದಸ್ಯರ ಹಾಗೂ ನಮ್ಮೂರಿನ ಉದಾರ ದಾನಿಗಳ ಸಹಕಾರದಿಂದ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮವು ಜುಮಾ ಮಸ್ಜಿದ್ ಕೊಡಂಗಾಯಿ ಯಲ್ಲಿ ಜರಗಿತು.
ಪ್ರಸ್ತುತ ಈ ಕಾರ್ಯಕ್ರಮನ್ನು
ಜಮಾಅತ್ ಖತೀಬರಾದ ಉಸ್ತಾದ್ ಅಬೂಬಕ್ಕರ್ ಸಿದ್ದಿಕ್ ಅರ್ಶದಿ ಯವರ ದುಆದೊಂದಿಗೆ ಸಮಿತಿ ಉಪಾಧ್ಯಕ್ಷರಾದ ಇಬ್ರಾಹಿಂ ಝ್ಯನಿ ಉದ್ಘಾಟಿಸಿದರು. ಮದ್ರಸ ಅಧ್ಯಾಪಕರಾದ ಮಹಮೂದ್ ಮುಸ್ಲಿಯಾರ್, ಆದಂ ಮುಸ್ಲಿಯಾರ್, ಜಮಾಹತ್ ಉಪಾಧ್ಯಕ್ಷರಾದ ಅಬ್ದುಲ್ ರಹ್ಮಾನ್ ಹಾಜಿ ಚನಿಲ, ಹಮೀದ್ ಟಿ ಉದ್ಯಮಿ, ಫಾರೂಕ್ ಕುಂಡಡ್ಕ ಉದ್ಯಮಿ ,ಅಬ್ದುಲ್ ಕುಂಞ ಮಾಡಾವು, ಅಶ್ರಫ್ ಬಿ ಎಂ ಟಿ, ಹಸನ್ ಬಿ ಹಾಗೂ ಸಮಿತಿ ಅಧ್ಯಕ್ಷರಾದ ಸಮದ್ ಸಿ ಎಚ್, ಸಮಿತಿ ಕೋಶಾಧಿಕಾರಿ ಅಬ್ದುಲ್ ಮಜೀದ್ ಟಿ ಎಂ, ಸಮಿತಿ ಸದಸ್ಯರಾದ ನಾಸಿರ್ ಕೆ ಹಾಗೂ ಫಲಾನುಭವಿಗಳಾದ ಎಲ್ಲಾ ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗವಹಿಸಿದರು.
ಸಮದ್ ಸಿ ಎಚ್ ಸ್ವಾಗತಿಸಿ
ಮಜೀದ್ ಟಿ ಎಂ
ವರದಿ: ಅಬೂ ಅಯಾನ್ ಕೊಡಂಗಾಯಿ