February 4, 2026

ಪುತ್ತೂರು: ಮುಖ್ಯ ರಸ್ತೆಗೆ ಬಿದ್ದ ಮಾವಿನ ಮರ: ಘಟನಾ ಸ್ಥಳಕ್ಕೆ ಶಾಸಕ ಅಶೋಕ್ ರೈ ಭೇಟಿ

0
image_editor_output_image-1815780809-1714234302927

ಪುತ್ತೂರು: ಬೃಹತ್ ಗಾತ್ರದ ಮಾವಿನ ಮರವೊಂದು ಏಕಾಏಕಿ ಧರೆಗುರುಳಿ ಬಿದ್ದು ಹಲವು ವಾಹನಗಳು ಜಖಂಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಶನಿವಾರ ರಾತ್ರಿ ನಡೆದಿದೆ.

ಪುತ್ತೂರಿನ ಬೊಳ್ವಾರ್ ಹರಿಪ್ರಸಾದ್ ಹೊಟೇಲ್ ಬಳಿ ಈ ಘಟನೆ ನಡೆದಿದ್ದು ನಿಲ್ಲಿಸಿದ್ದ ವಾಹನಗಳಿಗೆ ಹಾನಿಯಾಗಿದೆ. ಬೃಹತ್ ಮರಬಿದ್ದ ಪರಿಣಾಮ ತಮ್ಮ ವಾಹನವನ್ನ ಹೊರತರಲು ವಾಹನ ಮಾಲಿಕರು ಪರದಾಡಿದರೆ, ಬಿದ್ದ ಮರದ ಮಾವಿನ ಮಿಡಿ ಕೊಯ್ಯಲಯ ಜನ ಮುಗಿಬಿದ್ದಿದ್ದರು.

ಮರ ಬೀಳುವ ಸಂದರ್ಭ ಯಾರೂ ಇಲ್ಲದ ಪರಿಣಾಮ ಭಾರೀ ಅವಘಡ ತಪ್ಪಿದ್ದು ಮರದ ಕೊಂಬೆಗಳನ್ನು ಸ್ಥಳೀಯರ ನೆರವಿನಿಂದ ತೆರವು ಮಾಡುವ ಕಾರ್ಯ ನಡೆಯುತ್ತಿದೆ.

ಘಟನಾ ಸ್ಥಳಕ್ಮೆ ಶಾಸಕರು‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು‌ ಮರ ತೆರವು ಮಾಡುವಂತೆ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದರು.


ಮಧ್ಯಮ ಗಾತ್ರದ ಮಾವಿನ ಮರ ರಸ್ತೆಗೆ ಮುರಿದು ಬಿದ್ದಿತ್ತು. ಸಾರ್ವಜನಿಕರು, ವಾಹನಗಳು ರಸ್ತೆಯಲ್ಲಿ ಸಂಚರಿಸುತಿದ್ದರೂ ಯಾವುದೇ ಅಪಾಯ ಉಂಟಾಗಿಲ್ಲ. ಸ್ಥಳಕ್ಕೆ ಧಾವಿಸಿದ ಶಾಸಕರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿ ಮರವನ್ನು ತೆರವು ಮಾಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!