ಕಾಸರಗೋಡು | ಲಾರಿ, ಬೈಕ್ ನಡುವೆ ಅಪಘಾತದಲ್ಲಿ: ವಿದ್ಯಾರ್ಥಿ ಮೃತ್ಯು
ಕಾಸರಗೋಡು: ಲಾರಿ ಮತ್ತು ಬೈಕ್ ನಡುವೆ ಉಂಟಾದ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ನಡೆದಿರುವುದಾಗಿ ವರದಿಯಾಗಿದೆ.
ಮೃತ ಯುವಕನನ್ನು ಕುಂಬಳೆ ಸಮೀಪದ ಬಂಬ್ರಾಣ ಅಂಡಿತ್ತಡ್ಕದ ಯೂಸಫ್ ಕೈಫ್ (19) ಎಂದು ಗುರುತಿಸಲಾಗಿದೆ.
ಮಂಗಳೂರಿನ ಕಾಲೇಜೊಂದರ ವಿದ್ಯಾರ್ಥಿಯಾಗಿದ್ದ ಕೈಫ್ ನಾಲ್ಕು ದಿನಗಳ ಹಿಂದೆ ಬೈಕ್ ನಲ್ಲಿ ಕಾಲೇಜಿಗೆ ತೆರಳುತ್ತಿದ್ದಾಗ ಉಪ್ಪಳ ಸಮೀಪದ ಕುಕ್ಕಾರ್ ಎಂಬಲ್ಲಿ ಅಪಘಾತ ನಡೆದಿತ್ತು.




