ದಕ್ಷಿಣ ಕನ್ನಡ: ಪಶ್ಚಿಮ ಘಟ್ಟ ತಪ್ಪಲಿನ ಬೆಳ್ತಂಗಡಿ ತಾಲೂಕಿನ ಬಾಂಜಾರುಮಲೆ ಮತಗಟ್ಟೆಯಲ್ಲಿ ಮತದಾನ ಸಮಯ ಅಂತ್ಯವಾಗುವ 2 ಗಂಟೆ ಮುನ್ನವೇ ಶೇ.100 ಮತದಾನವಾಗಿದೆ.
ಸಂಜೆ 6 ಗಂಟೆಗೆ ಮತದಾನ ಮುಗಿಯುವ ಸಮಯವಾಗಿದ್ದು, ಅದಕ್ಕೂ ಮುನ್ನವೇ ಆ ಭಾಗದ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿರುವುದಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.