May 6, 2026

ಮೈತ್ರಿ ಪಕ್ಷಕ್ಕೆ ಕರಾವಳಿ ಜಿಲ್ಲೆಯಲ್ಲಿ ದೊಡ್ಡ ಹೊಡೆತ: JDS ತೊರೆದ ರಾಜ್ಯ, ಜಿಲ್ಲಾ ಮುಖಂಡರು

0
image_editor_output_image950478022-1713948704881.jpg

ಪುತ್ತೂರು: ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಲೋಕಸಭೆ ಚುನಾವಣೆ ಎದುರಿಸುತ್ತಿರುವ ಜೆಡಿಎಸ್ ಪಕ್ಷಕ್ಕೆ ಕರಾವಳಿ ಜಿಲ್ಲೆಗಳಲ್ಲಿ ಹೊಡೆತ ಬಿದ್ದಿದ್ದು, ಜಿಲ್ಲೆಯ ಸ್ಥಳೀಯರು ನಾಯಕರು ಸೇರಿದಂತೆ ರಾಜ್ಯ ನಾಯಕರು ಜೆಡಿಎಸ್ ಅನ್ನು ತೊರೆದಿದ್ದಾರೆ.

ಪುತ್ತೂರಿನಲ್ಲಿ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ಮುಖಂಡರು ನಾವೆಲ್ಲ ಜೆಡಿಎಸ್ ಪಕ್ಷದ ರಾಷ್ಟ್ರ ಮತ್ತು ರಾಜ್ಯ ಅಧ್ಯಕ್ಷರು ಮಾಧ್ಯಮಕ್ಕೆ ನೀಡುತ್ತಿರುವ ಹೇಳಿಕೆಗಳು ನೋಡುತ್ತಿದ್ದರೆ ಇವರು ಅಧಿಕಾರದ ದಾಹಕ್ಕೆ ಸಿಲುಕಿ ಈ ಪಕ್ಷದ ಜಾತ್ಯಾತೀತ ನಿಲುವನ್ನು ಸಂಪೂರ್ಣ ಮಣ್ಣು ಮಾಡಲಾಗಿದೆ. ಮಾತ್ರವಲ್ಲ ನಮ್ಮಂತ ಜಾತ್ಯತೀತ ನಿಲುವನ್ನು ಹೊಂದಿದವರಿಗೆ ಅಲ್ಲಿ ಉಸಿರೇ ಕಟ್ಟುವ ವಾತಾವರಣ ಸೃಷ್ಟಿಯಾಗಿದೆ. ಈಗ ಜೆಡಿಎಸ್ ಪಕ್ಷ ಕೋಮುವಾದಿ ಪಕ್ಷಗಳ ಜೊತೆ ಸೇರಿ ಅವರನ್ನು ಒಲೈಸಲು ಅಲ್ಪಸಂಖ್ಯಾತರನ್ನು ಸಂಪೂರ್ಣ ಕಡೆಗಣಿಸುತ್ತಿದ್ದಾರೆ.

ಜೆಡಿಎಸ್ ನ ಪುತ್ತೂರು ತಾಲೂಕು ಅಧ್ಯಕ್ಷರಾಗಿ ಜಿಲ್ಲಾ ಪತ್ರಿಕಾ ವಕ್ತಾರ ರಾಜ್ಯ ಕಾರ್ಯದರ್ಶಿಯಾಗಿ ಮತ್ತು ನನ್ನ ಮಿತ್ರರೂ ಆದ ಹಾರೂನ್ ರಶೀದ್ ಜೆಡಿಎಸ್ ಪಕ್ಷದ ಜಿಲ್ಲಾ ಅಧ್ಯಕ್ಷರು ಮತ್ತು ಹಕೀಂ ವಾಮಂಜೂರು ಅಲ್ಪಸಂಖ್ಯಾತ ರಾಜ್ಯ ಕಾರ್ಯದರ್ಶಿ ಹಾಗೂ ಪಿ.ಎಂ ಇಬ್ರಾಹಿಂ ಪರಪುಂಜ ತಾಲೂಕು ಉಪಾಧ್ಯಕ್ಷರು, ಮಹ್ಮಮದ್ ಗೋಳಿ ಕಟ್ಟೆ ಅಲ್ಪಸಂಖ್ಯಾತ ಜಿಲ್ಲಾ ಉಪಾಧ್ಯಕ್ಷರು, ಅಲ್ಲದೇ ಸವಾಝ್ ಬಂಟ್ವಾಳ ಜಿಲ್ಲಾ ಯುವ ಕಾರ್ಯದರ್ಶಿ ಸೇರಿದಂತೆ ಕಾರ್ಯಕರ್ತರು ಜೆಡಿಎಸ್ ತೊರೆದಿದ್ದಾರೆ.

Leave a Reply

Your email address will not be published. Required fields are marked *

error: Content is protected !!