May 6, 2026

ವಿಟ್ಲ: ಬಾವಿ ರಿಂಗ್ ಕ್ಲೀನಿಂಗ್ ವೇಳೆ ಇಬ್ಬರು ಮೃತಪಟ್ಟ ಪ್ರಕರಣ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭೇಟಿ-ಪರಿಹಾರದ ಭರವಸೆ

0
image_editor_output_image779192092-1713884643996

ವಿಟ್ಲ: ಬಾವಿ ರಿಂಗ್ ಕ್ಲೀನಿಂಗ್ ವೇಳೆ ಇಬ್ಬರು ಕಾರ್ಮಿಕರು ಮೃತಪಟ್ಟ ಘಟನೆ ಸಂಬಂಧಿಸಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮತ್ತು ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಅವರು ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಬಳಿಕ ಮಾಧ್ಯಮದವರ ಜತೆ ಮಾತನಾಡಿದ ಸಚಿವರು ಆಕಸ್ಮಿಕವಾಗಿ ಈ ಘಟನೆ ಸಂಭವಿಸಿದ್ದು, ಮೃತಪಟ್ಟವರು ಬಡವರಾಗಿದ್ದು, ಸರಕಾರದ ಜತೆ ಮಾತುಕತೆ ನಡೆಸಿ ಕುಟುಂಬಕ್ಕೆ ಪರಿಹಾರ ನೀಡುವ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಈ ಸಂದರ್ಭ ಪ್ರಮುಖರಾದ ರಮಾನಾಥ ವಿಟ್ಲ, ವಿಕೆಎಂ ಅಶ್ರಪ್, ಸುಭಾಶ್ಚಂದ್ರ ಶೆಟ್ಟಿ ಕುಳಾಲು, ಸಂದೇಶ್ ಶೆಟ್ಟಿ ಬಿಕ್ನಾಜೆ, ವಿಟ್ಲ ಪಡ್ನೂರು ಗ್ರಾ.ಪಂ ಸದಸ್ಯ ಹರ್ಷದ್ ಕುಕ್ಕಿಲ,  ಶ್ರೀನಿವಾಸ್ ಶೆಟ್ಟಿ, ಹಂಝ ವಿಕೆಎಂ, ಪೊಲೀಸ್ ಇನ್ಸ್ ಪೆಕ್ಟರ್ ಎಚ್ ಇ ನಾಗರಾಜ್, ಡಾ. ವೇದಾವತಿ  ಬಳ್ಳಾಲ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!