PUC ಪರೀಕ್ಷೆಯಲ್ಲಿ ಕಡಿಮೆ ಅಂಕ: ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ
ಕುಷ್ಟಗಿ: ಪಿಯು ದ್ವಿತೀಯ ಕಲಾ ವಿಭಾಗದಲ್ಲಿ ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಯಲಬುರ್ತಿ ಗ್ರಾಮದಲ್ಲಿ ನಡೆದಿದೆ.
ವಿಜಯಲಕ್ಷ್ಮಿ ಹೊನ್ನನಗೌಡ ಮಾಲಿಪಾಟೀಲ ಮೃತ ದುರ್ದೈವಿ.
ಕುಷ್ಟಗಿ ಬಾಲಕಿಯರ ಸ.ಪ.ಪೂ. ಕಾಲೇಜಿನ ವಿದ್ಯಾರ್ಥಿನಿ ವಿಜಯಲಕ್ಷ್ಮಿ ಪಿಯು ಪರೀಕ್ಷೆ ಫಲಿತಾಂಶದಲ್ಲಿ ಶೇ.75ಕ್ಕಿಂತ ಹೆಚ್ಚು ಅಂಕ ನಿರೀಕ್ಷಿಸಿದ್ದು, ಆಕೆಗೆ ಶೇ.59 ಅಂಕ ಬಂದಿತ್ತು.
ಏ.11 ರಂದು ಮನನೊಂದ ಆಕೆ ತೋಟದಲ್ಲಿದ್ದ ಮನೋಫಟೋಫಾಸ್ ಕ್ರಿಮಿನಾಶಕವನ್ನು ಯಾರಿಗೂ ಗೊತ್ತಾಗದಂತೆ ಮನೆಗೆ ತಂದು ಯಾರು ಇಲ್ಲದ ವೇಳೆ ವಿಷ ಸೇವಿಸಿದ್ದಾಳೆ.