ಕಡಬ ತಾಲೂಕು ಪಂಚಾಯತ್ ಇಒ ಮನೆ, ಕಚೇರಿ ಮೇಲೆ ಲೋಕಾಯುಕ್ತರು ದಾಳಿ
ಕಡಬ : ಕೊಡಗು ಜಿಲ್ಲೆಯ ಲೋಕಾಯುಕ್ತ ಪೊಲೀಸರು ಕಡಬದಲ್ಲಿ ದಾಳಿ ನಡೆಸಿ ಆಶ್ಚರ್ಯ ಮೂಡಿಸಿದ್ದಾರೆ..
ಕಡಬ ತಾಲೂಕು ಪಂಚಾಯತ್ ಇಒ ಬಿ.ವಿ ಜಯಣ್ಣ ಅವರ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತರು ದಾಳಿ ನಡೆಸಿದ್ದಾರೆ.
ಕಡಬ ತಾಲೂಕು ಪಂಚಾಯತ್ ಇಒ ಆಗಿ ಜಯಣ್ಣ ಇತ್ತೀಚೆಗಷ್ಟೇ ಅಧಿಕಾರ ವಹಿಸಿಕೊಂಡಿದ್ದರು.ಇದಕ್ಕೂ ಮೊದಲು ಸೋಮವಾರ ಪೇಟೆ ತಾಲೂಕ ಪಂಚಾಯತ್ ನಲ್ಲಿ ಅವರು ಇಒ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಅಲ್ಲಿರುವಾಗಲೇ ಇವರ ವಿರುದ್ಧ ಅಕ್ರಮ ಆಸ್ತಿಗಳಿಕೆಯ ದೂರು ದಾಖಲಾಗಿದ್ದು, ಆ ವಿಚಾರದ ತನಿಖೆಗೆ ಇಂದು ಕಡಬದಲ್ಲಿ ವಿಚಾರಣೆ ನಡೆಸಿದ್ದಾರೆ.
ಸೋಮವಾರಪೇಟೆಯ ಮನೆ, ಕಡಬದ ಕಚೇರಿ ಹಾಗೂ ಕಡಬದಲ್ಲೇ ಇರುವ ಜಯಣ್ಣ ಅವರ ಬಾಡಿಗೆ ಮನೆ ಮೇಲೆ ಏಕ ಕಾಲಕ್ಕೆ ದಾಳಿ ಮಾಡಲಾಗಿದೆ.
ಕೊಡಗು ಲೋಕಾಯುಕ್ತ ಡಿವೈಎಸ್ಪಿ ಪವನ್ ಕುಮಾರ್, ಇನ್ಸ್ ಪೆಕ್ಟರ್ ಲೋಕೇಶ್ ನೇತೃತ್ವದಲ್ಲಿ ದಾಳಿ ನಡೆದಿದ್ದು, ಇನ್ಸ್ ಪೆಕ್ಟರ್ ಶಶಿಕುಮಾರ್ ಹಾಗೂ ಸಿಬ್ಬಂದಿ ಜಯಣ್ಣ ಅವರ ವಿಚಾರಣೆ ನಡೆಸುತ್ತಿದ್ದಾರೆ.





