September 19, 2024

ಪುತ್ತೂರು: ಮಾಜಿ ಶಾಸಕ ಉರಿಮಜಲು ರಾಮ್ ಭಟ್ ನಿಧನಕ್ಕೆ ಟ್ವೀಟ್ ಮೂಲಕ ಸಂತಾಪ ಸೂಚಿಸಿದ ಮೋದಿ

0

ಮಂಗಳೂರು: ಜನಸಂಘ ಹಾಗೂ ಬಿಜೆಪಿ ನಾಯಕ ಪುತ್ತೂರಿನ ಮೊದಲ ಶಾಸಕ ಉರಿಮಜಲು ರಾಮ್ ಭಟ್ ನಿಧನಕ್ಕೆ ಪ್ರಧಾನಿ ಮೋದಿ ಟ್ವೀಟರ್ ಮೂಲಕ ಸಂತಾಪ ಸೂಚಿಸಿದ್ದಾರೆ.

“ಜನಸಂಘ ಮತ್ತು ಬಿಜೆಪಿಯ ಇತಿಹಾಸದಲ್ಲಿ ಉರಿಮಜಲು ಕೆ.ರಾಮ ಭಟ್ ಜಿ ಅವರಂತಹ ದಿಗ್ಗಜರಿಗೆ ವಿಶೇಷ ಸ್ಥಾನವಿದೆ. ಅವರು ಕರ್ನಾಟಕದಲ್ಲಿ ನಮ್ಮ ಪಕ್ಷವನ್ನು ಬಲಪಡಿಸಲು ಶ್ರಮಿಸಿದರು ಮತ್ತು ಜನರ ನಡುವೆ ದಣಿವರಿಯಿಲ್ಲದೆ ಸೇವೆ ಸಲ್ಲಿಸಿದರು. ಅವರ ನಿಧನದಿಂದ ನನಗೆ ದುಃಖವಾಗಿದೆ. ಅವರ ಕುಟುಂಬಕ್ಕೆ ಸಂತಾಪ. ಓಂ ಶಾಂತಿ” ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಕರಾವಳಿ ಕರ್ನಾಟಕದಲ್ಲಿ ಬಿಜೆಪಿ ಹಾಗೂ ಆರ್.ಎಸ್‌.ಎಸ್‌. ಗೆ ಭದ್ರ ಬುನಾದಿ ಹಾಕಿಕೊಟ್ಟ ಅಗ್ರಗಣ್ಯರಲ್ಲಿ ರಾಮ್ ಭಟ್ ಕೂಡ ಒಬ್ಬರಾಗಿದ್ದಾರೆ..

Leave a Reply

Your email address will not be published. Required fields are marked *

error: Content is protected !!