ಉಪ್ಪಿನಂಗಡಿ: ಅನ್ಯ ಕೋಮಿನ ಯುವಕರ ಮೇಲೆ ದಾಳಿ: ಬಿಗುವಿನ ವಾತಾವರಣ
ಉಪ್ಪಿನಂಗಡಿ: ಉಪ್ಪಿನಂಗಡಿ ಸಮೀಪ ಯುವಕರ ಮೇಲೆ ತಲವಾರ್ ದಾಳಿ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಹಲ್ಲೆ ಪ್ರಕರಣ ದಾಖಲಾಗಿದೆ.


ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ಎರಡು ತಂಡಗಳ ನಡುವೆ ಮಾತಿನ ಚಕಮಕಿ ನಡೆದು, ಅನ್ಯಕೋಮಿನ ಒಂದು ತಂಡದಿಂದ ಮತ್ತೊಂಡು ತಂಡದವರಿಗೆ ಹಲ್ಲೆ ನಡೆದಿದೆ.
ಉಪ್ಪಿನಂಗಡಿಯಲ್ಲಿ ಇತ್ತಂಡಗಳ ನಡುವೆ ತಲ್ವಾರ್ ದಾಳಿ ಮುಂದುವರೆದಿದ್ದು ಇದೀಗ ಉಪ್ಪಿನಂಗಡಿ ಸಮೀಪದ ಹಳಗೇಟು ಎಂಬಲ್ಲಿ ಮೂವರು ಹಿಂದೂ ಯುವಕರ ಮೇಲೆ ತಲವಾರು ದಾಳಿ ನಡೆದಿದೆ ಎಂದು ವರದಿಯಾಗಿದೆ.
ನಿನ್ನೆಯಷ್ಟೇ ಇಳಂತಿಲ ಎಂಬಲ್ಲಿ ನಾಲ್ವರು ಮುಸ್ಲಿಂ ಯುವಕರಿಗೆ ಅನ್ಯಕೋಮಿನ ತಂಡದಿಂದ ತ್ರಿಶೂಲ ದಾಳಿ ನಡೆದಿದ್ದು, ಈ ದಾಳಿಗೆ ಪ್ರತಿಯಾಗಿ ದಾಳಿ ನಡೆದಿದೆ ಎಂದು ಸಾರ್ವಜನಿಕರು ಮಾತನಾಡುತ್ತಿದ್ದಾರೆ. ಗಾಯಾಳುಗಳನ್ನು ಪುತ್ತೂರು ಆಸ್ಪತ್ರೆಗೆ ಸಾಗಿಸಲಾಗಿದೆ.






