February 3, 2026

ಗರ್ಭಿಣಿ ತಂಗಿಯ ಶಿರಚ್ಛೇದ ಮಾಡಿ ಸೆಲ್ಪಿ ತೆಗೆದುಕೊಂಡ ತಾಯಿ, ಮಗ

0
Screenshot_2021-12-06-17-30-10-48_680d03679600f7af0b4c700c6b270fe7.jpg

ಮುಂಬೈ: ಗರ್ಭಿಣಿ ಸಹೋದರಿಯ ಶಿರಚ್ಛೇದ ಮಾಡಿ ಅದರೊಂದಿಗೆ ತಾಯಿ ಮತ್ತು ಮಗ ಸೆಲ್ಫಿ ತೆಗೆದುಕೊಂಡ ಕ್ರೂರ ಘಟನೆ ಮಹಾರಾಷ್ಟ್ರದಲ್ಲಿ ರವಿವಾರ ಸಂಭವಿಸಿದೆ.

ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿ ನಡೆದ ಹತ್ಯೆಯಿಂದ ಇಡೀ ಜಿಲ್ಲೆಯ ಜನತೆ ಕಂಗಾಲಾಗಿದ್ದಾರೆ, ಹೆತ್ತ ತಾಯಿಯೇ ತನ್ನ ಮಗಳ ಕೊಲೆಗೆ ಪ್ರಚೋದನೆ ನೀಡಿರುವುದು ನಿಜಕ್ಕೂ ಮೈ ಜುಂ ಎನಿಸುವಂತದ್ದೇ.. ಮನುಷ್ಯನ ಕ್ರೂರತೆ ಎಷ್ಟರ ಮಟ್ಟಿಗೆ ಇರುತ್ತದೆ ಎಂಬುದಕ್ಕೆ ಈ ಘಟನೆಯೇ ಸ್ಪಷ್ಟ ನಿದರ್ಶನವಾಗಿದೆ.

ಘಟನೆ ವಿವರ:
ಕೀರ್ತಿ ಎಂಬ ಯುವತಿಯೊಬ್ಬಳು ತಾನು ಪ್ರೀತಿಸಿದ ಯುವಕನ ಜೊತೆ ಕಳೆದ ಜೂನ್ ತಿಂಗಳಲ್ಲಿ ಮನೆಯವರ ವಿರೋಧದ ನಡುವೆಯೂ ಮದುವೆಯಾಗಿದ್ದಾಳೆ, ಆದರೆ ಈ ವಿಚಾರ ಹೆತ್ತ ತಾಯಿ ಮತ್ತು ಆಕೆಯ ಸಹೋದರನಿಗೆ ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ, ಈ ಕಾರಣಕ್ಕೆ ಆಕೆಯನ್ನು ಹೇಗಾದರು ಮಾಡಿ ಕೊಲೆ ಮಾಡಲೇಬೇಕೆಂದು ತಾಯಿ ಮತ್ತು ಸಹೋದರ ನಿರ್ಧರಿಸಿದ್ದರು.

ಕಳೆದ ಒಂದು ವಾರದ ಹಿಂದೆ ಮಗಳ ಮೊಬೈಲ್ ನಂಬರ್ ಗೆ ಕಾಲ್ ಮಾಡಿದ ತಾಯಿ, ನಿನ್ನನ್ನು ನೋಡಲು ತುಂಬಾ ಮನಸ್ಸಾಗುತ್ತಿದೆ ಎಂದಿದ್ದಾರೆ, ತಾಯಿಯ ಹೇಳಿಕೆಗೆ ಮಗಳು ಮನೆಗೆ ಬರಲು ಹೇಳಿದ್ದಾಳೆ ಅದರಂತೆ ತಾಯಿ ಮತ್ತು ಸಹೋದರ ಡಿಸೆಂಬರ್ 5 ರಂದು ಆಕೆಯ ಮನೆಗೆ ತೆರಳಿದ್ದಾರೆ, ಈ ವೇಳೆ ಕೀರ್ತಿಯ ಪತಿಯು ಮನೆಯಲ್ಲಿದ್ದು ತನ್ನ ರೂಮಿನೊಳಗೆ ಇದ್ದ ಎನ್ನಲಾಗಿದೆ. ದೂರದಿಂದ ಬಂದ ತಾಯಿ ಮತ್ತು ಸಹೋದರನಿಗೆ ಕುಡಿಯಲು ನೀರು ಕೊಟ್ಟು ಚಹಾ ಮಾಡಿ ಕೊಡಲು ಅಡುಗೆ ಕೋಣೆಯೊಳಗೆ ಹೋದಾಗ ಹಿಂದಿನಿಂದ ಹೋದ ಸಹೋದರ ಹರಿತವಾದ ಆಯುಧದಿಂದ ತನ್ನ ಸಹೋದರಿ ಗರ್ಭಿಣಿಯೆಂದು ಕೂಡಾ ಯೋಚಿಸದೆ ಶಿರಚ್ಛೇದ ಮಾಡಿದ್ದಾನೆ ಅಲ್ಲದೆ ಈ ವೇಳೆ ಹೆತ್ತ ತಾಯಿ ಮಗಳ ಕಾಲನ್ನು ಹಿಡಿದು ಕೊಲೆಗೆ ಸಹಕಾರ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!