July 27, 2024

ಮಹಿಳಾ ಕ್ರಿಕೆಟ್‍ನಲ್ಲಿ ಅತ್ಯಂತ ವೇಗವಾಗಿ ಬೌಲಿಂಗ್ ಮಾಡಿ ದಾಖಲೆ ಬರೆದ ಶಬ್ನಮ್ ಇಸ್ಮಾಯಿಲ್

0

ನವದೆಹಲಿ: ದಕ್ಷಿಣ ಆಫ್ರಿಕಾದ ವೇಗಿ ಶಬ್ನಮ್ ಇಸ್ಮಾಯಿಲ್ ಅವರು ಮಹಿಳಾ ಕ್ರಿಕೆಟ್‍ನಲ್ಲಿ ಅತ್ಯಂತ ವೇಗವಾಗಿ ಬೌಲಿಂಗ್ ಮಾಡುವ ಮೂಲಕ ಇತಿಹಾಸವನ್ನು ಸೃಷ್ಟಿಸಿದ್ದಾರೆ.

ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ದೆಹಲಿ ಕ್ಯಾಪಿಟಲ್ಸ್ ವಿರುದ್ಧದ ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‍ಗಾಗಿ ಆಡುತ್ತಿರುವ ಇಸ್ಮಾಯಿಲ್ ಅವರು 132.1ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ ಈ ದಾಖಲೆ ಬರೆದಿದ್ದಾರೆ.

ಪಂದ್ಯದ ಮೂರನೇ ಓವರ್‍ನ ಎರಡನೇ ಬಾಲ್ ಇದಾಗಿದ್ದು, ಅವರ ಬಾಲ್ ಬ್ಯಾಟ್ ಮಾಡುತ್ತಿದ್ದ ಪ್ಯಾಡ್‍ಗೆ ಬಡಿಯಿತು ಆಗ ಮುಂಬೈ ಆಟಗಾರರು ಒಗ್ಗಟ್ಟಿನಿಂದ ಎಲ್‍ಬಿಡಬ್ಲಯೂ ಮನವಿ ಮಾಡಿದರು ಆದರೆ ಅಂಪೈರ್ ತಿರಸ್ಕರಿಸಿದರು.

Leave a Reply

Your email address will not be published. Required fields are marked *

error: Content is protected !!