ಮಂಗಳೂರು: ಪುತ್ತೂರು ಮೂಲದ Phd ವಿದ್ಯಾರ್ಥಿನಿ ನಾಪತ್ತೆ
ಮಂಗಳೂರು: ಉಳ್ಳಾಲ ದೇರಳಕಟ್ಟೆಯ ವಿದ್ಯಾಸಂಸ್ಥೆಯಲ್ಲಿ ಎಂಎಸ್ಸಿ ಮುಗಿಸಿ ಫುಡ್ ಸೆಕ್ಯುರಿಟಿ ವಿಷಯದಲ್ಲಿ ಪಿಎಚ್‌ಡಿ ಸಂಶೋಧನ ಅಧ್ಯಯನ ನಡೆಸುತ್ತಿದ್ದ ವಿದ್ಯಾರ್ಥಿನಿ ನಾಪತ್ತೆಯಾದ ಘಟನೆ ನಡೆದಿದೆ.
ಪುತ್ತೂರು ಮೂಲದ ಚೈತ್ರಾ (27) ನಾಪತ್ತೆಯಾದ ವಿದ್ಯಾರ್ಥಿನಿಯಾಗಿದ್ದಾಳೆ. ಚೈತ್ರಾಳ ತಂದೆ ನಿಧನರಾಗಿದ್ದು ಕೋಟೆಕಾರು ಮಾಡೂರಿನ ಪಿ.ಜಿ.ಯಲ್ಲಿ ಸ್ನೇಹಿತೆಯೊಂದಿಗೆ ನೆಲೆಸಿದ್ದಾಳೆ. ಮಂಗಳೂರಿನಲ್ಲಿ ದೊಡ್ಡಪ್ಪನ ಮನೆಯಲ್ಲಿದ್ದು ಚೈತ್ರಾ ಎಂಎಸ್ಸಿ ಪೂರೈಸಿದ್ದರು. ಸಂಶೋಧನೆಯ ಹಿನ್ನಲೆಯಲ್ಲಿ ಮಾಡೂರಿನಲ್ಲಿ ನೆಲೆಸಿದ್ದ ಚೈತ್ರಾ ಫೆ. 17ರಂದು ಬೆಳಗ್ಗೆ 9 ಗಂಟೆಗೆ ಪಿ.ಜಿ.ಯಿಂದ ತನ್ನ ಸ್ಕೂಟರ್‌ನಲ್ಲಿ ತೆರಳಿದ್ದು, ಮಾಡೂರಿಗೂ ಬರದೆ, ದೊಡ್ಡಪ್ಪನ ಮನೆಗೂ ತೆರಳದೆ ನಾಪತ್ತೆಯಾಗಿದ್ದಾರೆ. ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಚೈತ್ರಾ ಕಾಣೆಯದ ಕುರಿತು ಪ್ರಕರಣ ದಾಖಲಾಗಿದೆ.