March 21, 2026

ಹೆಲ್ಮೆಟ್‌ ಧರಿಸಿಲ್ಲವೆಂದು ವಾಹನ ತಡೆದ ಟ್ರಾಫಿಕ್‌ ಪೊಲೀಸ್‌: ಕೈ ಬೆರಳನ್ನೇ ಕಚ್ಚಿದ ಸವಾರ

0
IMG-20240213-WA0021.jpg



ಬೆಂಗಳೂರು: ವ್ಯಕ್ತಿಯೊಬ್ಬ ಟ್ರಾಫಿಕ್‌ ಪೊಲೀಸ್‌ ಸಿಬ್ಬಂದಿಯ ಕೈ ಬೆರಳನ್ನೇ ಕಚ್ಚಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಜೊತೆಗೆ ವ್ಯಕ್ತಿಯ ವಿರುದ್ಧ ಭಾರೀ ಆಕ್ರೋಶ ಕೂಡ ವ್ಯಕ್ತವಾಗಿದೆ.

28 ವರ್ಷದ ಸಯ್ಯದ್ ಸಫಿ ಎಂಬ ವ್ಯಕ್ತಿ ಹೆಲ್ಮೆಟ್‌ ಧರಿಸದೇ ಸ್ಕೂಟಿ ಚಲಾಯಿಸುತ್ತಿದ್ದ. ಇದನ್ನು ಗಮನಿಸಿದ ಟ್ರಾಫಿಕ್‌ ಪೊಲೀಸ್‌ ಆತನನ್ನು ತಡೆದು ಆತನ ಬಳಿಯಿಂದ ಕೀ ಕಿತ್ತುಕೊಂಡಿದ್ದಾರೆ. ಅಲ್ಲದೇ ಹೆಡ್ ಕಾನ್‌ಸ್ಟೆಬಲ್ ಸಿದ್ದರಾಮೇಶ್ವರ ಕೌಜಲಗಿ ಅವರು ಟ್ರಾಫಿಕ್‌ ಉಲ್ಲಂಘಿಸಿದ ಪ್ರಕರಣ ದಾಖಲಿಸಿಕೊಳ್ಳಲು ವೀಡಿಯೋ ಮಾಡಿದ್ದಾರೆ.

ಕೀ ಕಿತ್ತುಕೊಂಡಿದ್ದಕ್ಕೆ ಸಿಟ್ಟಿಗೆದ್ದ ಯುವಕ, ಟ್ರಾಫಿಕ್‌ ಪೊಲೀಸ್‌ ಕೈ ಬೆರಳನ್ನೇ ಕಚ್ಚಿದ್ದಾನೆ. ಇತ್ತ ಹೆಡ್ ಕಾನ್‌ಸ್ಟೆಬಲ್‌ನ ಫೋನ್ ಕಿತ್ತುಕೊಂಡ ಸಯ್ಯದ್ ಸಫಿ, ತನ್ನ ವೀಡಿಯೋ ಯಾಕೆ ರೆಕಾರ್ಡ್‌ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾನೆ. ತಕ್ಷಣ ಆತನನ್ನು ಸೆರೆ ಹಿಡಿದು ಬಂಧಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!