February 2, 2026

ಸ್ಪೀಕರ್ ಯು.ಟಿ.ಖಾದರ್ ಗೆ ಹೊಸ ಐಷಾರಾಮಿ ಕಾರು

0
image_editor_output_image281107976-1707817615985.jpg

ಬೆಂಗಳೂರು: ಕರ್ನಾಟಕ ವಿಧಾನಸಭೆಯ ಬಜೆಟ್ ಅಧಿವೇಶನದ ಮೊದಲ ದಿನವೇ ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದ‌ರ್ ಅವರ ಪ್ರಯಾಣಕ್ಕೆ ಹಲವು ವಿಶೇಷತೆಗಳನ್ನು ಒಳಗೊಂಡ ಹೊಸ ಐಷಾರಾಮಿ ಫಾರ್ಚೂನರ್ ಕಾರು ಆಗಮಿಸಿದೆ.

ಸ್ಪೀಕರ್‌ ಅವರಿಗೆ ಸಚಿವಾಲಯದಿಂದ ಈ ವಿಶೇಷ ಕಪ್ಪು ಬಣ್ಣದ ಫಾರ್ಚೂನರ್ ಕಾರಿನ ಸೌಲಭ್ಯವನ್ನು ಕಲ್ಪಿಸಲಾಗಿದ್ದು, ಇದರ ಬೆಲೆ 41 ಲಕ್ಷ ರು.ಗಳಾಗಿದೆ ಎಂದು ತಿಳಿದುಬಂದಿದೆ.

ಕಾರಿನ ಮುಂಭಾಗ ಹಾಗೂ ಹಿಂಭಾಗದಲ್ಲಿ ಗಂಡಭೇರುಂಡ ಲಾಂಛನ ಹೊಂದಿದೆ. ರಾಜ್ಯಪಾಲರ ಹೊರತಾಗಿ ಸ್ಪೀಕರ್‌ಗೆ ಮಾತ್ರ ಇದನ್ನು ಹಾಕಲು ಅವಕಾಶ ಇದೆ. ಮಾರುಕಟ್ಟೆಯಲ್ಲಿ ಕಪ್ಪು ಬಣ್ಣದ ಫಾರ್ಚೂನರ್ (ಇ) ಕಾರಿನ ದರ 33.43 ಲಕ್ಷ ರೂ. (ಪೆಟ್ರೋಲ್) ಹಾಗೂ ಡೀಸೆಲ್ ಕಾರಿನ ದರ 35.93 ರಿಂದ 51.44 ಲಕ್ಷ ಆಗುತ್ತದೆ. ಆದರೆ, ಸ್ಪೀಕರ್ ಅವರಿಗೆ ಖರೀದಿಸಿರುವ ಫಾರ್ಚೂನರ್‌ಗೆ ಕೆಲ ವಿಶೇಷ ವಿನ್ಯಾಸ ಮಾಡಿರುವುದರಿಂದ ಒಟ್ಟು 41 ಲಕ್ಷ ರೂ. ವೆಚ್ಚವಾಗಿದೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

error: Content is protected !!