March 17, 2026

ಅಡ್ಯಾರ್ ಗುಡ್ಡದಲ್ಲಿ ಜಮೀಯ್ಯತುಲ್ ಫಲಾಹ್ “ಮುಲಾಕಾತ್-24”

0
image_editor_output_image-912533099-1706438343895

ಜಮೀಯ್ಯತುಲ್ ಫಲಾಹ್ ಬಂಟ್ವಾಳ ಘಟಕದ ಆಜೀವ ಸದಸ್ಯರ ಕುಟುಂಬ ಸಮ್ಮಿಲನ “ಮುಲಾಕಾತ್-24” ಸಂಭ್ರಮ ಗಣರಾಜ್ಪೋತ್ಸವ ದಿನ ಶುಕ್ರವಾರ (26/01) ಮಂಗಳೂರಿನ ಅಡ್ಯಾರ್ ಸಮೀಪದ ಅಡ್ಯಾರ್ ಹಿಲ್ಸ್ ನಲ್ಲಿ ನಡೆಯಿತು.

ಜಮೀಯ್ಯತುಲ್ ಫಲಾಹ್ ಅಧ್ಯಕ್ಷ ರಶೀದ್ ವಿಟ್ಲ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ 4 ಮಂದಿಯನ್ನು ಸನ್ಮಾನಿಸಲಾಯಿತು. ಡಾ. ಎಂ.ಎಂ. ಶರೀಫ್ ಪಾಣೆಮಂಗಳೂರು (ವೈದ್ಯಕೀಯ), ಎಂ.ಎಚ್. ಇಕ್ಬಾಲ್ (ಉದ್ಯಮ), ಬಿ. ಮೊಹಮ್ಮದ್ ತುಂಬೆ (ಶಿಕ್ಷಣ), ಪಿ. ಮೊಹಮ್ಮದ್ ಪಾಣೆಮಂಗಳೂರು (ಮಾನವೀಯ ಸೇವೆ) ಇವರನ್ನು “ಮುಲಾಕಾತ್” ಗೌರವ ನೀಡಿ ಪುರಸ್ಕರಿಸಲಾಯಿತು. ಎಂ.ಫ್ರೆಂಡ್ಸ್ ಟ್ರಸ್ಟ್ ಅಧ್ಯಕ್ಷ ಮಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು, ಎನ್.ಆರ್.ಸಿ.ಸಿ. ಮಾಜಿ ಅಮೀರ್ ಫಾರೂಕ್ ಜುಬೈಲ್, ಚಾಮರಾಜನಗರ ಪೊಲೀಸ್ ಉಪನಿರೀಕ್ಷಕಿ ಯಾಸ್ಮಿನ್ ತಾಜ್ ಮುಖ್ಯ ಅತಿಥಿಯಾಗಿದ್ದರು.

ಉಪ್ಪಳ ಇಶಲ್ ತಂಡದ ಸಾಂಸ್ಕೃತಿಕ ಕಾರ್ಯಕ್ರಮ, ಪುರುಷರಿಗೆ, ಮಹಿಳೆಯರಿಗೆ, ಮಕ್ಕಳಿಗೆ ವಿವಿಧ ಸ್ಪರ್ಧೆಗಳು ನಡೆಯಿತು. ಅಬ್ದುಲ್ ರಝಾಕ್ ಅನಂತಾಡಿ ಕಾರ್ಯಕ್ರಮ ಸಂಯೋಜಿಸಿದರು. ತಾಹಿರಾ ವಿ.ಎಚ್. ಅಶ್ರಫ್ ನಿರೂಪಿಸಿದರು. ಹಕೀಮ್ ಕಲಾಯಿ, ಆಶಿಕ್ ಕುಕ್ಕಾಜೆ, ಉಬೈದ್ ವಿಟ್ಲ, ಸುಲೈಮಾನ್ ಸೂರಿಕುಮೇರು, ಮುಸ್ತಫಾ ಗೋಳ್ತಮಜಲು, ಅಬೂಬಕರ್ ನೋಟರಿ, ಅಬೂಬಕರ್ ಪುತ್ತು ಉಪ್ಪಿನಂಗಡಿ, ಶೇಖ್ ರಹ್ಮತುಲ್ಲಾ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಜಮೀಯ್ಯತುಲ್ ಫಲಾಹ್ ಬಂಟ್ವಾಳ ಘಟಕಕ್ಕೆ ಲೈಫ್ ಮೆಂಬರರಾಗಿ ನೂತನವಾಗಿ ಸೇರ್ಪಡೆಗೊಂಡ ಇಮ್ತಿಯಾಝ್ ಗೋಳ್ತಮಜಲು, ರಫೀಕ್ ಹಾಜಿ ಸುರಿಬೈಲು, ಸಯ್ಯದ್ ಝಹೂರ್ ಕಾವಳಕಟ್ಟೆ, ಇರ್ಶಾದ್ ತುಂಬೆ, ಕರೀಮ್ ಸಜಿಪ, ರಿಯಾಝ್ ಫರಂಗಿಪೇಟೆ, ಇಕ್ಬಾಲ್ ಶೀತಲ್ ವಿಟ್ಲ, ಇಬ್ರಾಹಿಂ ಮೊಯ್ದಿನ್ ನಂದಾವರ, ಅಶ್ರಫ್ ಸಾಲೆತ್ತೂರು ಅಭಿನಂದಿಸಲಾಯಿತು.

Leave a Reply

Your email address will not be published. Required fields are marked *

You may have missed

error: Content is protected !!