May 9, 2026

ಚೆಕ್‌ಬೌನ್ಸ್‌ ಪ್ರಕರಣ:
ಸಚಿವ ಮಧು ಬಂಗಾರಪ್ಪ ಗೆ ಭಾರೀ ಮೊತ್ತದ ದಂಡ ವಿಧಿಸಿದ ನ್ಯಾಯಾಲಯ

0
Bangarappa_1703772639790_1703772666956.jpeg

ಬೆಂಗಳೂರು: ಚೆಕ್‌ಬೌನ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಮಧು ಬಂಗಾರಪ್ಪ ಅವರಿಗೆ 6,96,70,000 ಕೋಟಿ ರೂ ದಂಡ ವಿಧಿಸಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ ಆದೇಶ ಹೊರಡಿಸಿದೆ. ರಾಜೇಶ್‌ ಎಕ್ಸ್‌ಪೋರ್ಟ್ಸ್‌ ಸಂಸ್ಥೆ ನೀಡಿದ್ದ ಚೆಕ್‌ಬೌನ್ಸ್‌ ಪ್ರಕರಣದಲ್ಲಿ ಸಚಿವರಿಗೆ 6.96 ಕೋಟಿ ರೂಗಳ ಡಂದವನ್ನು ವಿಧಿಸಿದೆ.

2011ರಲ್ಲಿ ಚೆಕ್‌ ನೀಡಿದ್ದರು. 50 ಲಕ್ಷ ರೂ ಪಾವತಿಸಿ ಉಳಿದ ಮೊತ್ತ ಪಾವತಿಸಿರಲಿಲ್ಲ. ಖಾತೆಯಲ್ಲಿ ಹಣ ಇಲ್ಲದ ಕಾರಣ ಚೆಕ್‌ಬೌನ್ಸ್‌ ಆಗಿತ್ತು. ಈ ಹಿನ್ನಲೆ ರಾಜೇಶ್‌ ಎಕ್ಸ್‌ಪೋರ್ಟ್ಸ್‌ ಸಂಸ್ಥೆ 6.60 ಕೋಟಿ ರೂಗಳ ಪರಿಹಾರ ಕೋರಿ ಕೋರ್ಟ್‌ ಮೊರೆ ಹೋಗಿತ್ತು.

6 ಕೋಟಿ 96 ಲಕ್ಷ 60 ಸಾವಿರ ರೂಪಾಯಿ ಮೊತ್ತದ ಚೆಕ್ ಬೌನ್ಸ್ ಆಗಿದ್ದು, ಸರ್ಕಾರಕ್ಕೆ 10 ಸಾವಿರ ರೂಪಾಯಿ ದಂಡ ಪಾವತಿಸಬೇಕೆಂದು ಕೋರ್ಟ್ ಆದೇಶ ಹೊರಡಿಸಿದೆ. ದೂರುದಾರರಿಗೆ ನೀಡಬೇಕಿರುವ ಹಣದ ಜೊತೆಗೆ ದಂಡ ಪಾವತಿಸದೇ ಇದ್ದಲ್ಲಿ 6 ತಿಂಗಳ ಜೈಲು ಶಿಕ್ಷೆ ಅನುಭವಿಸುವಂತೆ ಆದೇಶದಲ್ಲಿ ಕೋರ್ಟ್ ಹೇಳಿದೆ.

ಮಧು ಬಂಗಾರಪ್ಪ ದೂರುದಾರರಿಗೆ ಕೇವಲ 50 ಲಕ್ಷ ರೂ. ನೀಡಿ ಉಳಿದ ಹಣ ಪಾವತಿಸಿರಲಿಲ್ಲ. ಜನವರಿ 30ರೊಳಗೆ 6.10 ಲಕ್ಷ ಪಾವತಿಸುವುದಾಗಿ ಮಧು ಬಂಗಾರಪ್ಪ ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ. ಆದರೆ ವಿಶೇಷ ಕೋರ್ಟ್, ಮುಚ್ಚಳಿಕೆ ಒಪ್ಪಲು ನಿರಾಕರಿಸಿದ್ದು, ಈ ಹಿಂದೆಯೂ ಮಧು ಬಂಗಾರಪ್ಪ ನೀಡಿದ್ದ ಮುಚ್ಚಳಿಕೆ ಪಾಲಿಸಿಲ್ಲ ಆದ್ದರಿಂದ ಮನವಿಯನ್ನು ತಿರಸ್ಕರಿಸುತ್ತಿರುವುದಾಗಿ ಹೇಳಿದೆ.

Leave a Reply

Your email address will not be published. Required fields are marked *

error: Content is protected !!