ಪ್ಯಾಡ್, ಹೆಲ್ಮೆಟ್, ಗ್ಲೌಸ್ ಧರಿಸದೆ ಬ್ಯಾಟಿಂಗ್ ಗೆ ಧಾವಿಸಿದ ಹಾರಿಸ್ ರವೂಫ್
ನವದೆಹಲಿ: ಸಿಡ್ನಿ ಥಂಡರ್ ವಿರುದ್ಧ ಶನಿವಾರ ಆಲ್ಬರಿಯಲ್ಲಿ ನಡೆದ ಬಿಬಿಎಲ್ ಟಿ-20 ಪಂದ್ಯದಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ತಂಡದ 11ನೇ ಕ್ರಮಾಂಕದ ಬ್ಯಾಟರ್ ಹಾರಿಸ್ ರವೂಫ್ ಅವರು ಪ್ಯಾಡ್, ಹೆಲ್ಮೆಟ್ ಹಾಗೂ ಕೈಗವಸು ಧರಿಸದೆ ಬ್ಯಾಟಿಂಗ್ ಮಾಡಲು ಧಾವಿಸಿದರು.
ಈ ಪಂದ್ಯದಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ಬ್ಯಾಟಿಂಗ್ ಮಾಡುವಾಗ ಪಾಕಿಸ್ತಾನ್ ಆಟಗಾರ ಹ್ಯಾರಿಸ್ ರೌಫ್ ಪ್ಯಾಡ್ ಧರಿಸದೇ ಕಣಕ್ಕಿಳಿದಿದ್ದಾರೆ. ಇನಿಂಗ್ಸ್ ನ ಕೊನೆಯ ಓವರ್ನ ಕೊನೆಯ ಎಸೆತದಲ್ಲಿ ಹ್ಯಾರಿಫ್ ರೌಫ್ ಬ್ಯಾಟಿಂಗ್ ಬಂದಿದ್ದರು. ಆದರೆ ಕ್ರೀಸ್ ಗೆ ಆಗಮಿಸಿದ ರೌಫ್ ಕಾಲಿಗೆ ಪ್ಯಾಡ್ ಧರಿಸಿರಲಿಲ್ಲ.
ಇದಕ್ಕೆ ಮುಖ್ಯ ಕಾರಣ ರೌಫ್ ನಾನ್ ಸ್ಟ್ರೈಕರ್ನಲ್ಲಿ ಕಣಕ್ಕಿಳಿದಿರುವುದು. ಅಂದರೆ 19.5ನೇ ಓವರ್ ನಲ್ಲಿ ಸ್ಟೆಕೆಟೀ (0) ರನೌಟ್ ಆಗಿದ್ದರು. ಹೀಗಾಗಿ ಕೊನೆಯ ಎಸೆತವಿರುವಾಗ ಹ್ಯಾರಿಸ್ ರೌಫ್ ನಾನ್ ಸ್ಟ್ರೈಕರ್ ನಲ್ಲಿ ಕಣಕ್ಕಿಳಿದರು. ಅತ್ತ ಕೊನೆಯ ಎಸೆತದಲ್ಲಿ ಬ್ಯಾಟಿಂಗ್ ಇರಲ್ಲ ಎಂದರಿತ ಹ್ಯಾರಿಸ್ ರೌಫ್ ಪ್ಯಾಡ್ ಧರಿಸದೇ ಬಂದು ಎಲ್ಲರ ಗಮನ ಸೆಳೆದರು. ಇದೀಗ ಪಾಕ್ ಕ್ರಿಕೆಟಿಗನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.