May 9, 2026

ವಿಟ್ಲ: ವಿಠಲ ಪಿಯು ಕಾಲೇಜು ವಾರ್ಷಿಕೋತ್ಸವ

0
image_editor_output_image108675774-1701432551778

ವಿಟ್ಲ: ವಿಠಲ ಎಜ್ಯುಕೇಶನ್ ಸೊಸೈಟಿ ಅಧೀನದ ವಿಠಲ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ ಶುಕ್ರವಾರ ನಡೆಯಿತು.

ನ್ಯಾಯವಾದಿ ಅರುಣ್ ಶ್ಯಾಮ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ  ಇಂತಹ ಕಾರ್ಯಕ್ರಮಗಳಿಂದ ಭಾಗವಹಿಸುವುದರಿಂದ ಮಕ್ಕಳಿಗೆ ಪ್ರೇರಣೆಯಾಗುತ್ತದೆ. ಗ್ರಾಮೀಣ, ಕುಗ್ರಾಮ ಭಾಗದ ಮಕ್ಕಳಿಗೆ ವಿಠಲ ವಿದ್ಯಾ ಸಂಘ ಸಹಕಾರಿಯಾಗಿದೆ. ನಿಸ್ವಾರ್ಥದಿಂದ ಈ ಸಂಸ್ಥೆ ಸೇವೆ ನೀಡುತ್ತಿದೆ. ಪ್ರಸ್ತುತ ಕಾಲದಲ್ಕಿ ಶಿಕ್ಷಣ ವ್ಯಾಪಾರಿಕರಣವಾಗುತ್ತಿದ್ದು, ಇದು ನಡುವೆ ಹಲವು ಬಡವರು ಇಲ್ಲಿ ಉತ್ತಮ ಶಿಕ್ಷಣ ನೀಡಲಾಗುತ್ತಿದೆ.

ಅಧ್ಯಕ್ಷ ಮುಗುಳಿ ತಿರುಮಲೇಶ್ವರ ಭಟ್ ಅಧ್ಯಕ್ಷತೆ ವಹಿಸಿದ್ದರು. ದಾನಿಗಳಾದ ಕೃಷ್ಣ ಪ್ರಸಾದ್ ಕೊಪ್ಪ ಅವರನ್ನು ಸನ್ಮಾನಿಸಲಾಯಿತು.
ವಿಠಲ ಪ್ರೌಢ ಶಾಲಾ ಮುಖ್ಯ ಶಿಕ್ಷಕ  ಕಿರಣ್ ಕುಮಾರ್ ಬ್ರಹ್ಮಾವರ, ಕೋಶಾಧಿಕಾರಿ ಬಾಬು ಕೊಪ್ಪಳ, ಸದಸ್ಯರುಗಳಾದ ರವಿಪ್ರಕಾಶ್, ನಿತ್ಯಾನಂದ ನಾಯಕ್, ಸದಾಶಿವ ಬನ, ಸಿ ಎಫ್ ಸಿಕ್ವೇರ, ಎಂ ಕೆ ಪುರುಷೋತ್ತಮ ಭಟ್, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ  ಆಶ್ಲೇಷ್, ಪ್ರೀತೇಶ್, ಪ್ರಣತಿ ಕೆ ಆರ್, ಲತಾಶ್ರೀ ಉಪಸ್ಥಿತರಿದ್ದರು.

ಕಾಲೇಜ್ ಪ್ರಾಂಶುಪಾಲ ಆದರ್ಶ ಚೊಕ್ಕಾಡಿ, ಸುಪ್ರಜಿತ್   ಐಟಿಐ ಪ್ರಾಂಶುಪಾಲ ರಮೇಶ್ ವರದಿ ಮಂಡಿಸಿದರು.
ವಿಠಲ ಎಜ್ಯುಕೇಶನ್ ಸೊಸೈಟಿ ಕಾರ್ಯದರ್ಶಿ ರಾಧಾಕೃಷ್ಣ ನಾಯಕ್ ಸ್ವಾಗತಿಸಿದರು. ಜಲಜಾಕ್ಷಿ ನಿರೂಪಿಸಿದರು. ಆಶಾ ಅತಿಥಿಗಳನ್ನು ಪರಿಚಯಿಸಿದರು. ಅರುಣಾ ವಂದಿಸಿದರು. ಉಪನ್ಯಾಸಕರಾದ ಚಂದ್ರಕಾಂತ್, ನಳಿನಿ, ಸವಿತಾ, ಶ್ರೀನಿವಾಸ ಗೌಡ, ರಶ್ಮಿಲಾ ಬಹುಮಾನ ವಿಜೇತರ ಪಟ್ಟಿ ಓದಿದರು.

Leave a Reply

Your email address will not be published. Required fields are marked *

error: Content is protected !!