October 8, 2024

ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮ್ಯಾನೆಜರ್ ಮಂಗಳೂರಿನ ಊರ್ಮಿಳಾ ರೊಸಾರಿಯೊ

0



ಮಂಗಳೂರು: ಭಾರತ ತಂಡವನ್ನು ಸೋಲಿಸಿ ಸತತ ಆರನೇ ಬಾರಿಗೆ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮ್ಯಾನೆಜರ್ ಕರಾವಳಿ ಮೂಲದ ಯುವತಿ (34) ವರ್ಷದ ಊರ್ಮಿಳಾ ರೊಸಾರಿಯೊ.

ಮಂಗಳೂರು ಸಮೀಪದ ಕಿನ್ನಿಗೋಳಿ ಮೂಲದ ಐವಿ ಮತ್ತು ವ್ಯಾಲೆಂಟೈನ್ ರೊಸಾರಿಯೋ ದಂಪತಿಯ ಪುತ್ರಿಯಾಗಿರುವ ಊರ್ಮಿಳಾ ರೊಸಾರಿಯೊ ಕಳೆದ ಏಳು ವರ್ಷಗಳ ಹಿಂದೆ ಇವರ ತಂದೆ ತಾಯಿ ಭಾರತಕ್ಕೆ ಮರಳಿ ಸಕಲೇಶಪುರದಲ್ಲಿ ನೆಲೆಸಿದ್ದಾರೆ.

ಇನ್ನು ಇವರು ಕಾರ್ನೆಗೀ ಮೆಲನ್ ವಿಶ್ವವಿದ್ಯಾನಿಲಯದಿಂದ ಬಿಬಿಎ ಪದವಿಯನ್ನು ಪಡೆದುಕೊಂಡಿದ್ದಾರೆ. ತನ್ನ ಬಾಲ್ಯದಿಂದಲೂ ಕ್ರೀಡಾ ಪಟುವಾಗಿದ್ದ ಊರ್ಮಿಳಾ ಕತಾರ್ ಟೆನಿಸ್ ಫೆಡರೇಶನ್ನೊಂದಿಗೆ ಮೂರು ವರ್ಷಗಳ ಕಾಲ ಕೆಲಸ ಮಾಡಿದ್ದರು.

ಬಳಿಕ ಆಸ್ಟ್ರೇಲಿಯಾದಲ್ಲಿ ಅವರು ಮೊದಲು ಅಡಿಲೇಡ್ ಕ್ರಿಕೆಟ್ ತಂಡದೊಂದಿಗೆ ಸುಮಾರು ಮೂರು ವರ್ಷಗಳ ಕಾಲ ಕೆಲಸ ಮಾಡಿ ನಂತರ, ಅವರು ತಂಡದ ಮ್ಯಾನೇಜರ್ ಆಗಿ ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದರು.

Leave a Reply

Your email address will not be published. Required fields are marked *

error: Content is protected !!