May 9, 2026

ಕಾಸರಗೋಡು: ರೈಲು ಬಡಿದು ಟ್ರ್ಯಾಕ್ ಮ್ಯಾನ್‌ ಮೃತ್ಯು

0
image_editor_output_image-367443899-1699148950700.jpg

ಕಾಸರಗೋಡು: ರೈಲು ಹಳಿ ತಪಾಸಣೆ ನಡೆಸುತ್ತಿದ್ದಾಗ ರೈಲು ಬಡಿದು ಟ್ರ್ಯಾಕ್ ಮ್ಯಾನ್‌ ಮೃತ ಪಟ್ಟ ಘಟನೆ ಇಂದು ಬೆಳಿಗ್ಗೆ ಮೊಗ್ರಾಲ್ ಪುತ್ತೂರು ನಡೆದಿದೆ.

ಆಂಧ್ರ ಪ್ರದೇಶ ನವೀನ್ (26)ಮೃತ ಪಟ್ಟವರು . ಕುಂಬಳೆ ಸಮೀಪದ ಶಿರಿಯ ಸೇತುವೆ ಬಳಿ ಘಟನೆ ನಡೆದಿದೆ. ಬಂದ್ಯೋಡು ಮುಟ್ಟಂ ನಿಂದ ಶಿರಿಯ ತನಕ ಹಳಿ ತಪಾಸಣೆಗೆ ನವೀನ್ ಗೆ ನೀಡಲಾಗಿತ್ತು.

ಸೇತುವೆ ಸಮೀಪ ತಪಾಸಣೆಗೆ ನಡೆಸುತ್ತಿದ್ದಾಗ ಮಂಗಳೂರು ಕಡೆಗೆ ತೆರಳುತ್ತಿದ್ದ ಚೆನೈ ಸೂಪರ್ ಫಾಸ್ಟ್ ರೈಲು ಬಡಿದಿದೆ. ಕೆಲ ಸಮಯದ ಹಿಂದೆಯಷ್ಟೇ ನವೀನ್ ರೈಲ್ವೆ ಕೆಲಸಕ್ಕೆ ಸೇರಿದ್ದರು. ರೈಲ್ವೆ ಅಧಿಕಾರಿಗಳು, ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!