November 22, 2024

ಮಂಗಳೂರು: ಪೊಲೀಸ್‌ ಆಯುಕ್ತರ ಹೆಸರಿನಲ್ಲಿ ಹಣಕ್ಕೆ ಬೇಡಿಕೆ: ವಾಟ್ಸಪ್ ಮೆಸೆಜ್ ಮೂಲಕ ವಂಚನೆಗೆ ಯತ್ನ

0

ಮಂಗಳೂರು: ಮಂಗಳೂರು ಪೊಲೀಸ್ ಆಯುಕ್ತ ಅನುಪ್ ಅಗರ್ವಾಲ್ ಹೆಸರಿನಲ್ಲಿ ಹಣ ಬೇಡಿಕೆ ಇಟ್ಟು ವಂಚಿಸಲು ಯತ್ನಿಸಿದ ಘಟನೆ ನಡೆದಿದೆ.

ಹೌದು ಪೊಲೀಸರ ಆಯುಕ್ತ ಕೂಡ ಬಿಡದ ವಂಚಕರು ವಾಟ್ಸಪ್‌ ಮೂಲಕ ಹಣ ವಸೂಲಿ ಮಾಡಲು ಪ್ಲಾನ್​ ಮಾಡಿದ್ದಾರೆ. ನಕಲಿ ನಂಬರ್ ನಿಂದ ವಾಟ್ಸಪ್ ಮೆಸೆಜ್ ಮಾಡಿ ಕಮಿಷನರ್ ಹೆಸರು ಹೇಳಿಕೊಂಡು ಹಣ ಕೇಳಿದ್ದಾನೆ ವಂಚಕ.

ಆಯುಕ್ತರ ಹೆಸರು ಬಳಸಿ ನಾನು ಆಸ್ಪತ್ರೆಯಲ್ಲಿದ್ದೇನೆ ಯುಪಿಐ ಸರಿಯಿಲ್ಲ ಸ್ವಲ್ಪ ಹಣ ನೀಡಿ ಒಂದು ಗಂಟೆಯಲ್ಲಿ ಮರು ಪಾವತಿ ಮಾಡ್ತೇನೆ ಎಂದು ವಂಚಕ ಮೆಸೇಜ್ ಮಾಡಿದ್ದಾನೆ. ಹೀಗಾಗಿ ಈ ಬಗ್ಗೆ ಸಾರ್ವಜನಿಕರಿಗೆ ಕಮಿಷನರ್ ಮನವಿ ಮಾಡಿದ್ದಾರೆ.

ಯಾರು ಈ ಮೆಸೇಜ್ ಗೆ ಮಾರು ಹೋಗಬೇಡಿ.ಇದು ಸುಳ್ಳು ಸಂದೇಶ ನನ್ನ ಹೆಸರು ಬಳಕೆ ಮಾಡಿದ್ದಾರೆ ಎಂದು ಪೊಲೀಸ್ ಆಯುಕ್ತ ಅನುಪ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!