March 21, 2026

ವಿಟ್ಲ: ಕುಡ್ತಮುಗೇರು ಎಂಬಲ್ಲಿ ನಡೆದ ಪಿಕಪ್ ವಾಹನ ಕಳವು ಪ್ರಕರಣ: ಕೇರಳ ರಾಜ್ಯದ ಎಂಟು ಮಂದಿ ಆರೋಪಿಗಳ ಬಂಧನ

0
image_editor_output_image1199305975-1697305468691

ವಿಟ್ಲ: ಕುಡ್ತಮುಗೇರು ಎಂ. ಎಚ್. ಶಾಮಿಯಾನ ಶಾಮಿಯಾನ ಮಾಲಕಕೊಬ್ಬರಿಗೆ ಸೇರಿದ ಪಿಕ್‌ ಅಪ್‌ ವಾಹನ ಕಳವು ಪ್ರಕರಣದ 8ಮಂದಿ ಆರೋಪಿಗಳನ್ನು ಬಂಧಿಸಿದ ಪೊಲೀಸರು ವಾಹನ ಪತ್ತೆ ಮಾಡುವಲ್ಲಿ ವಿಫಲರಾಗಿದ್ದಾರೆ.

ಕೇರಳ ಮೂಲದ ರಂಷನ್ ಯಾನೆ ಸಾನು, ಜುನ್ಸಿಫ್, ನೌಫಲ್, ಹಂಸಕ್, ತಬ್ರಿಜ, ಮೊಹಮ್ಮದ್ ಉಸೈನ್, ಹ್ಯಾರಿಸ್, ಮೊಹಮ್ಮದ್ ಅಯೂಬ ಖಾನ್ ಎಂಬುವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ನ್ಯಾಯಾಂಗ ಬಂಧನ ಬಂಧಿಸಲಾಗಿದೆ.

ಸೆ. 23 ರಂದು ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕುಡ್ತಮುಗೇರಲ್ಲಿ ಶಾಮಿಯಾನ ಸಾಮಾಗ್ರಿಯ ಜತೆಗೆ ನಿಲ್ಲಿಸಿದ್ದ ವಾಹನವನ್ನು ಕಳವುಗಯ್ಯಲಾಗಿದ್ದು, ಗೋಣಿಕೊಪ್ಪದಲ್ಲಿ ಅಗೋಚರವಾದ ಪಿಕಪ್ ಎಲ್ಲಿ ಎಂಬುದು ಇನ್ನೂ ಪತ್ತೆಯಾಗಿಲ್ಲ

ಗೋಣಿಕೊಟ್ಟದ ಗುಜುರಿ ಅಂಗಡಿಯಿಂದ ಶಾಮಿಯಾನದ ಪಿಕಪ್ ನಲ್ಲಿದ್ದ ಟಿನ್ ಶೀಟ್ ಹಾಗೂ ಕಬ್ಬಿಣದ ಪೈಪ್ ಗಳನ್ನು ಹಿಂದಿರುಗಿಸಿದ್ದಾರೆ. 2015ಮಾಡೆಲ್ ನ 8ಲಕ್ಷ ಮೌಲ್ಯದ ಪಿಕಪ್ ವಾಹನ ಇದಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!