February 3, 2026

ಬೆಂಗಳೂರಿನ ಅಗರಬತ್ತಿ ಕಾರ್ಖಾನೆಯಲ್ಲಿ ಬೆಂಕಿ ಅವಘಡ: 8 ಬೈಕ್ಗಳು ಸುಟ್ಟು ಭಸ್ಮ
 

0
hr14.10.23-agarabathi1.jpg


ಬೆಂಗಳೂರು: ಬೆಂಗಳೂರಿನ ಪೈಪ್ಲೈನ್ ರಸ್ತೆಯ ಚೋಳರಪಾಳ್ಯದಲ್ಲಿ ಇರುವ ಅಗರಬತ್ತಿ ಕಾರ್ಖಾನೆಯಲ್ಲಿ ಬೆಂಕಿ ಅವಘಡ ಸಂಭವಿಸಿದೆ.

ಕಳೆದ ಐದು ವರ್ಷಗಳಿಂದ ಗುಡಿಕೈಗಾರಿಕೆ ರೀತಿ ಮನೆಯಲ್ಲೇ ಅಗರಬತ್ತಿ ಕಾರ್ಖಾನೆ ನಡೆಲಾಗುತ್ತಿದ್ದು, ಗ್ರೌಂಡ್​ ಫ್ಲೋರ್​ನಲ್ಲಿ ಅಗರಬತ್ತಿ ತಯಾರಿಕೆಗೆ ಬೇಕಾಗಿದ್ದ ರಾಸಾಯನಿಕಗಳನ್ನು ಶೇಕರಿಸಿಡಲಾಗಿತ್ತು.

ಇನ್ನು ಆಕಸ್ಮಿಕವಾಗಿ ಹತ್ತಿಕೊಂಡ ಬೆಂಕಿಯಿಂದಾಗಿ ರಾಸಾಯನಿಕಗಳಿದ್ದ ಬಾಕ್ಸ್​ಗಳು ಬ್ಲಾಸ್ಟ್​​ ಆಗಿ ರಾಸಾಯನಿಗಳು ರಸ್ತೆಗೆ ಹರಿದ ಪರಿಣಾಮ ರಸ್ತೆಗೂ ಬೆಂಕಿ ಆವರಿಸಿದ್ದು, ಮನೆ ಮುಂದೆ ನಿಲ್ಲಿಸಿದ್ದ ಎಂಟು ಬೈಕ್​ಗಳು ಸುಟ್ಟು ಭಸ್ಮವಾಗಿವೆ.

ವಿಜಯನಗರ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!