February 4, 2026

ವಿಟ್ಲ : ಅನ್ಯಕೋಮಿನ ಯುವತಿ ಜತೆ ಅಸಭ್ಯವಾಗಿ ವರ್ತಿಸಿ ಕೇರಳ ಮೂಲದ ಯುವಕ: ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣ

0
IMG-20231012-WA0000.jpg

ಬಂಟ್ವಾಳ : ಅನ್ಯಕೋಮಿನ ಯುವಕರ ಜೊತೆ ಯುವತಿಯೋರ್ವಳು ಪತ್ತೆಯಾದ ಘಟನೆ ವಿಟ್ಲ ಪೋಲೀಸ್ ಠಾಣಾ ವ್ಯಾಪ್ತಿಯ ಪೆರುವಾಯಿ ಸಮೀಪ ನಡೆದಿದೆ.
ಇಬ್ಬರು ಯುವಕರ ಜೊತೆಗೆ ಯುವತಿಯೋರ್ವಳು ತಿರುಗಾಡುತ್ತಿರುವ ಬಗ್ಗೆ ಸಂಶಯದಿಂದ ಸ್ಥಳೀಯರು ವಿಟ್ಲ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ.

ಮೂವರು ಬಸ್ಸೊಂದರಲ್ಲಿ ಬಂದು ಕುದ್ದುಪದವಿನಲ್ಲಿ ಬಸ್ಸಿಂದ ಇಳಿದು ಅಲ್ಲೇ ಪಕ್ಕದಲ್ಲಿದ್ದ ಬಸ್ಸು ತಂಗುದಾಣದಲ್ಲಿ ಕುಳಿತಿದ್ದರು. ಈ ವೇಳೆ ಸ್ಥಳೀಯರು ಅವರನ್ನು ವಿಚಾರಿಸಿದಾಗ ಉಪ್ಪಳ ಕಡೆ ತೆರಳುವ ಇನ್ನೊಂದು ಬಸ್ಸಿನಲ್ಲಿ ಆ ಮೂವರು ಅಲ್ಲಿಂದ ತೆರಳಿ ಪೆರುವಾಯಿಯಲ್ಲಿ ಬಸ್ಸಿಂದಿಳಿದು ಪಕ್ಕದಲ್ಲಿರುವ ಬಸ್ಸು ತಂಗುದಾಣದಾಣದಲ್ಲಿ ಕುಳಿತಿದ್ದರು.
ಮೂವರು ತುಂಬಾ ಸಲುಗೆಯಿಂದ ಇರುವುದನ್ನು ಕಂಡ ಸ್ಥಳೀಯರು ಅವರನ್ನು ವಿಚಾರಿಸಿ ಬಳಿಕ ವಿಟ್ಲ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ವಿಟ್ಲ ಠಾಣಾ ಪೊಲೀಸರು ಆ ಮೂವರನ್ನು ವಶಕ್ಕೆ ಪಡೆದಿರುವುದಾಗಿ ಮಾಹಿತಿ ಲಭಿಸಿದೆ. ಮೂವರೂ ವಿದ್ಯಾರ್ಥಿಗಳಾಗಿದ್ದು, ಪೆರ್ಲ ಆಸುಪಾಸಿನವರಾಗಿದ್ದು, ಅವರು‌ ಉಪ್ಪಳ ಕಡೆ ಸುತ್ತಾಡಲು ತೆರಳುವ ಸಲುವಾಗಿ ಬಂದಿರುವುದಾಗಿ ಅವರು ಪೊಲೀಸರಲ್ಲಿ ತಿಳಿಸಿರುವುದಾಗಿ ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

Leave a Reply

Your email address will not be published. Required fields are marked *

error: Content is protected !!