May 14, 2026

ಬಂಟ್ವಾಳ: ದ್ವಿಚಕ್ರ ವಾಹನದ ಸೀಟಿನಡಿ ಇಟ್ಟಿದ್ದ 1 ಲಕ್ಷ ರೂ. ಕಳವು

0
image_editor_output_image577924236-1696667712415.jpg

ಸಂಗ್ರಹ ಚಿತ್ರ

ಬಂಟ್ವಾಳ: ದ್ವಿಚಕ್ರವಾಹನದಲ್ಲಿ ಇರಿಸಲಾಗಿದ್ದ ಲಕ್ಷಾಂತರ ರೂ.ನಗದು ಕಳವಾದ ಘಟನೆ ಬಿಸಿರೋಡಿನಲ್ಲಿ ನಡೆದಿದೆ.

ನರಿಕೊಂಬು ನಿವಾಸಿ ಪ್ರಕಾಶ್ ಕೋಡಿಮಜಲು ಎಂಬವರ ರೂ.1 ಲಕ್ಷ ಹಣ ಕಳವಾಗಿದೆ ಎಂದು ಅವರು ನಗರ ಪೋಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಅವರು ಶುಕ್ರವಾರ ಬೆಳಿಗ್ಗೆ ರೂ.1.40 ಲಕ್ಷ ಹಣವನ್ನು ಬ್ಯಾಂಕಿನಿಂದ ಡ್ರಾ ಮಾಡಿ ಬಳಿಕ ಬಿಸಿರೋಡಿನ ಮಿನಿವಿಧಾನ ಸೌಧದ ಕಚೇರಿಯ ಮುಂಭಾಗದಲ್ಲಿ ಇರಿಸಲಾಗಿದ್ದ, ದ್ವಿಚಕ್ರವಾಹನದ ಸೀಟಿನಡಿ ಇರುವ ಬಾಕ್ಸ್ ನಲ್ಲಿ ಇರಿಸಿದ್ದರು.

ಬಳಿಕ ಬೇರೆಬೇರೆ ಕೆಲಸ ನಿಮಿತ್ತ ಅಲ್ಲಿಂದ ತೆರಳಿದ್ದರು.

ಮಧ್ಯಾಹ್ನ ಬಳಿಕ ಬಂದು ಸೀಟು ಲಾಕ್ ತೆರೆದಾಗ ಅದರೊಳಗೆ ಇರಿಸಲಾಗಿದ್ದ 1.40 ಲಕ್ಷದಲ್ಲಿ 40 ಸಾವಿರ ಮಾತ್ರ ಇದ್ದು ಉಳಿದ 1ಲಕ್ಷ ಹಣ ಕಳವಾಗಿದೆ ಎಂದು ತಿಳಿಸಿದ್ದಾರೆ.

ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave a Reply

Your email address will not be published. Required fields are marked *

error: Content is protected !!