April 1, 2025

ಮಂಗಳೂರು: ಮನೆಯ ಬೀಗ ಮುರಿದು ಕಳ್ಳತನ: ಇಬ್ಬರು ಆರೋಪಿಗಳನ್ನು ಬಂಧಿಸಿದ ಬಜಪೆ ಪೊಲೀಸರು
 

0


ಮಂಗಳೂರು: ಮನೆಯ ಬೀಗ ಮುರಿದು ಕಳ್ಳತನ ಮಾಡಿದ ಇಬ್ಬರು ಆರೋಪಿಗಳನ್ನ ಬಜಪೆ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳಾದ ಸುರತ್ಕಲ್‌ ಬೊಕ್ಕಬೆಟ್ಟು ನಿವಾಸಿ ತೌಸೀಫ್‌ ಅಹಮ್ಮದ್‌(34) ಹಾಗೂ ಕಸಬಾ ಬೆಂಗ್ರೆಯ ನಿವಾಸಿ ಮೊಹಮ್ಮದ್‌ ಫರಾಜ್‌(27) ಎಂದು ಗುರುತಿಸಲಾಗಿದೆ.

ಇವರು ಬಜಪೆ ಪೊಲೀಸ್‌ ರಾಣೆಯಲ್ಲಿ ದಾಖಲಾಗಿರುವ 2 ಪ್ರತ್ಯೇಕ ಮನೆ ಕಳವು ಪ್ರಕರಣಗಳ ಆರೋಪಿಗಳಾಗಿದ್ದಾರೆ. 13 ಜನವರಿ2023ರಂದು ಅಡ್ಡೂರು ಗ್ರಾಮದ ಪುಣಿಕೋಡಿಯ ರಸ್ತೆ ಬದಿಯಲ್ಲಿರುವ ಸದಾಶಿವ ಪೂಜಾರಿ ಎಂಬವರ ಮನೆಯ ಬೀಗ ಮುರಿದು ಕಳ್ಳತನ ಮಾಡಿದ್ದಾರೆ. ಅಲ್ಲದೇ 26 ಮಾರ್ಚ್‌2021ರಂದು ಬಡಗುಳಿಪಾಡಿ ಗ್ರಾಮದ ಮನಲಪದವು ರಸ್ತೆ ಬದಿಯಲ್ಲಿರುವ ಸದಾಶಿವ ಸಾವಂತ ಎಂಬವರ ಮನೆಯ ಬೀಗವನ್ನು ಮುರಿದು ಮನೆಯಲ್ಲಿದ ಚಿನ್ನಾಭರಣವನ್ನು ದೋಚಿದ್ದಾರೆ.
ಒಟ್ಟು 4 ಲಕ್ಷಕ್ಕೂ ಹೆಚ್ಚು ಮೌಲ್ಯದ ಒಟ್ಟು 75 ಗ್ರಾಂ ತೂಕದ ಚಿನ್ನಾಭರಣ, ಹಾಗೂ ಕಳವು ಮಾಡಲು ಉಪಯೋಗಿಸಿದ50,000ರೂ. ಮೌಲ್ಯದ ಬೈಕ್‌ನ್ನು ವಶಕ್ಕೆ ಪಡೆಯಲಾಗಿದೆ.

 

 

ಆರೋಪಿಗಳ ವಿರುದ್ಧ ಪಣಂಬೂರು ಪೊಲೀಸ್‌ ರಾಣೆ,ಉತ್ತರ ಪೊಲೀಸ್‌ ರಾಣೆ, ದಕ್ಷಿಣ ಪೊಲೀಸ್‌ ರಾಣೆ, ಬಂಟ್ವಾಳ ನಗರ ಪೊಲೀಸ್‌ ರಾಣೆ, ಮತ್ತು ಉಡುಪಿ ನಗರ ಪೊಲೀಸ್‌ ರಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದೆ.

ಆರೋಪಿಗಳ ಪತ್ತೆ ಕಾರ್ಯದಲ್ಲಿ ಮಂಗಳೂರು ನಗರದ ಪೊಲೀಸ್‌ ಆಯುಕ್ತರಾದ ಅನುಪಮ್‌ ಅಗರವಾಲ್‌ ಮಾಗದರ್ಶನದಲ್ಲಿ ಡಿಸಿಪಿ ಸಿದ್ದಾರ್ಥ ಗೋಯೆಲ್‌ ಹಾಗೂ ಡಿಸಿಪಿ (ಕ್ರೈಂ) ದಿನೇಶ್‌ ಕುಮಾರ್‌ ರವರ ನಿರ್ದೇಶನದಂತೆ ಮಂಗಳೂರು ಉತ್ತರ ಉಪ ವಿಭಾಗ ಎಸಿಪಿ ಮನೋಜ್‌ ಕುಮಾರ್‌ ಮತ್ತು ಬಜಪೆ ಪೊಲೀಸ್‌ ರಾಣೆಯ ನಿರೀಕ್ಷಕರಾದ ಗುರುರಾಜ್‌ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಲಾಗಿದೆ.”

Leave a Reply

Your email address will not be published. Required fields are marked *

error: Content is protected !!