September 26, 2026

ಬಂಟ್ವಾಳ ಗ್ರಾಮಾಂತರ ಠಾಣೆಗೆ ಪೊಲೀಸ್ ಇನ್ಸ್ ಪೆಕ್ಟರ್ ಆಗಿ ಶಿವಕುಮಾರ್ ಅಧಿಕಾರ

0
IMG-20230918-WA0005.jpg



ಬಂಟ್ವಾಳ: ಇಲ್ಲಿನ ಗ್ರಾಮಾಂತರ ಠಾಣೆಗೆ ಪೂರ್ಣಾವಧಿಗೆ ಪೊಲೀಸ್ ಇನ್ಸ್ ಪೆಕ್ಟರ್ ನೇಮಕವಾಗದೇ ಖಾಲಿ ಇದ್ದ ಹುದ್ದೆಗೆ ಕೊನೆಗೂ ನೇಮಕಾತಿಯಾಗಿದೆ. ಬಂಟ್ವಾಳ ‌ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಆಗಿ ಶಿವಕುಮಾರ್ ಅವರು ಕರ್ತವ್ಯಕ್ಕೆ ಹಾಜರಾಗಿದ್ದಾರೆ.


ಕಳೆದ ಕೆಲವು ಸಮಯಗಳಿಂದ ಖಾಲಿಯಾಗಿದ್ದ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ಬೆಳ್ತಂಗಡಿ ವೃತ್ತ ನಿರೀಕ್ಷಕರಾಗಿದ್ದ ಶಿವಕುಮಾರ್ ಅವರನ್ನು ಸರಕಾರ ನಿಯುಕ್ತಿಗೊಳಿಸಿತ್ತು. ಟಿ.ಡಿ. ನಾಗರಾಜ್ ಅವರ ವರ್ಗಾವಣೆ ಬಳಿಕ ಇಲ್ಲಿಗೆ ಇನ್ಸ್ ಪೆಕ್ಟರ್ ನೇಮಕವಾಗಿರಲಿಲ್ಲ. ಚುನಾವಣೆ ಕಳೆದು ಕೆಲ ಸಮಯದ ಬಳಿಕ ಇದೀಗ ಸರಕಾರ ನೇಮಕ ಅದೇಶ ಮಾಡಿದ್ದು, ಇಂದು ಕರ್ತವ್ಯಕ್ಕೆ ಹಾಜರಾದರು.

ಈ ಹಿಂದೆ ಬಂಟ್ವಾಳ ಗ್ರಾಮಾಂತರ ಹಾಗೂ ನಗರ ಠಾಣೆಗಳಿಗೆ ಠಾಣಾಧಿಕಾರಿಗಳ ವರ್ಗಾವಣೆಯಿಂದ ಇನ್ಸ್ ಪೆಕ್ಟರ್ ಗಳೇ ಇಲ್ಲದೆ ಇದ್ದ ಪ್ರಸಂಗವಿತ್ತು. ಇದು ತಾಲೂಕಿನಲ್ಲಿ ಚರ್ಚೆಗೂ ಕಾರಣವಾಗಿತ್ತು.

 

Leave a Reply

Your email address will not be published. Required fields are marked *

You may have missed

error: Content is protected !!