May 11, 2026

ವಿದ್ಯುತ್‌ ತಂತಿ ಸ್ಪರ್ಶಿಸಿ 10ವರ್ಷದ ಬಾಲಕ ಮೃತ್ಯು

0
18-09-2023akdeath.jpg


 
ತುಮಕೂರು: ಆಟವಾಡುತ್ತಿದ್ದ ವೇಳೆ ವಿದ್ಯುತ್‌ ತಂತಿ ಸ್ಪರ್ಶಿಸಿ ಬಾಲಕನೊಬ್ಬ ಸಾವನ್ನಪ್ಪಿರುವ ಘಟನೆ ಕುಣಿಗಲ್ ಪಟ್ಟಣದಲ್ಲಿ ವರದಿಯಾಗಿದೆ. ಋತ್ವಿಕ್‌ (10 ವರ್ಷ) ಮೃತಪಟ್ಟ ಬಾಲಕ ಎಂದು ಗುರುತಿಸಲಾಗಿದೆ.


ರವಿವಾರ ರಾತ್ರಿ ಮನೆ ಸಮೀಪ ನಿವೇಶನ ಒಂದರಲ್ಲಿ ಆಟ ಆಡುತ್ತಿದ್ದ  ವೇಳೆ  ಋತ್ವಿಕ್ ಸಮೀಪದಲ್ಲಿದ್ದ ವಿದ್ಯುತ್ ತಂತಿಯನ್ನು ಮೆಟ್ಟಿದ್ದ. ಆಗ ವಿದ್ಯುತ್ ಪ್ರವಹಿಸಿ ದುರಂತ ಸಂಭವಿಸಿದೆ.

ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ವಿದ್ಯುತ್‌ ಹರಿಯುವ ತಂತಿಗಳನ್ನು ಮಕ್ಕಳು ಆಡುವ ಜಾಗದಲ್ಲಿ ಬಿಟ್ಟಿದ್ದೇ ದುರಂತಕ್ಕೆ ಕಾರಣ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!